ಸತತ 9ನೇ ದಿನವೂ ತೈಲ ದರ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ದರ ಹೀಗಿದೆ?

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಗಳು ಸತತ 9ನೇ ದಿನವೂ ಏರಿಕೆ ಕಂಡಿದ್ದು, ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಶತಕದ ಗಡಿ ದಾಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಮತ್ತೆ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದೆ.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100.13 ರೂಪಾಯಿ ಆಗಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚು ದುಬಾರಿಯಾಗಿದೆ.
ಕಳೆದ ಎಂಟು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 2.61 ರೂ., ಡೀಸೆಲ್ ದರ ಲೀಟರ್ ಗೆ 3.16 ರೂ ಹೆಚ್ಚಳವಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 89.54 ರೂ ಗೆ ಏರಿಕೆಯಾಗಿದೆ. ಇದು ದಾಖಲೆಯ ಗರಿಷ್ಠ ಮಟ್ಟವಾಗಿದೆ. ಡೀಸೆಲ್ ದರ ಕೂಡ 25 ಪೈಸೆ ಏರಿಕೆಯಾಗಿ 79.95ರೂ ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.98ಏರಿಕೆಯಾಗಿದ್ದು, ಡೀಸೆಲ್ ದರ 86.96ರೂ ಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ 92.51 ರೂ ಹಾಗೂ ಡೀಸೆಲ್ ಬೆಲೆ 84.74 ರೂ ಗೆ ಏರಿಕೆಯಾಗಿದೆ.

ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 91.66 ರೂಗೆ ಮತ್ತು ಡೀಸೆಲ್ 84.99 ರೂಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 90.76 ರೂಗೆ ಮತ್ತು ಡೀಸೆಲ್ 83.52 ರೂಗೆ ಏರಿಕೆಯಾಗಿದೆ.