ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ಮೂಲ ವಿಜ್ಞಾನ ವಿಭಾಗವು ಸಹಪಠ್ಯ ಚಟುವಟಿಕೆ ಘಟಕ ,ಐಇಇಇ ಹಾಗೂ ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್‌ನ ಸಹಯೋಗದೊಂದಿಗೆ ದಿನಾಂಕ 28 ಫೆಬ್ರವರಿ 2026 ರಂದು ಸರ್ ಸಿ ವಿ ರಾಮನ್ ಇವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯವಿಜ್ಞಾನ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ಜೋಸೆಫ್
ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ
ಕ್ಷೇಮಪಾಲನ ಡೀನ್ ಡಾ. ಕೆ ಜ್ಯೋತಿ ದಾಮೋದರ್ ಇವರು
ಭಾಗವಹಿಸಿದ್ದರು.
ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಜ್ಞಾನವು ತಂತ್ರಜ್ಞಾನ ಅಭಿವೃದ್ಧಿ ಹಾಗೂ ನವೀನತಾ ಪರಿಸರ ವ್ಯವಸ್ಥೆಯಲ್ಲಿ ವಹಿಸುವ ಮಹತ್ವದ ಪಾತ್ರದ ಬಗ್ಗೆ ವಿವರಿಸಿದರು. ಇವರು ಸರ್ ಸಿ ವಿ ರಾಮನ್ ಸೇರಿದಂತೆ ಭಾರತೀಯ ವಿಜ್ಞಾನಿಗಳ ಕೊಡುಗೆಗಳನ್ನು ಸ್ಮರಿಸಿದರು.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ “ವಿಮೆನ್ ಇನ್ ಸೈನ್ಸ್:
ಕ್ಯಾಟಲೈಸಿಂಗ್ ವೀಕ್ಸಿತ್ ಭಾರತ್” ಎಂಬ ವಿಷಯದಡಿ ಉಪನ್ಯಾಸವನ್ನು ನೀಡಿದರು. ಇವರು ತಮ್ಮ ಉಪನ್ಯಾಸದಲ್ಲಿ ಮಹಿಳಾ ವಿಜ್ಞಾನಿಗಳ ವಿಶಿಷ್ಟ ಕೊಡುಗೆಗಳನ್ನು ಉಲ್ಲೇಖಿಸಿದರು. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣವು ವೀಕ್ಷೀತ್ ಭಾರತದ ಕನಸನ್ನು ಸಾಕಾರಗೋಳಿಸುತ್ತದೆ ಎಂದು ತಿಳಿಸಿದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಮಾತನಾಡಿ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಚಿಂತನೆ , ತಾರ್ಕಿಕ ವಿಶ್ಲೇಷಣೆ ಹಾಗೂ ನವೀನ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಅವರು ಮುಖ್ಯ ಅತಿಥಿಗಳು, ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಜಾಗೃತಿ ಮತ್ತು ನವೀನತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ವಿಜ್ಞಾನದಿನದ ಮಹತ್ವವನ್ನು ವಿವರಿಸಿದರು.
















