ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ.3 ರಿಂದ 6 ರವರೆಗೆ ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠೆ ಶ್ರೀ ಕಾಲಭೈರವ ಬಿಂಬ ಪ್ರತಿಷ್ಠಾಪನೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಮಹಾಚಂಡಿಕಾಯಾಗ, ನಿರಂತರ ಮಹಾ ಅನ್ನಸಂತರ್ಪಣೆಯು ಜರುಗಲಿದೆ.
ಆ ಪ್ರಯುಕ್ತ ಗುರುವಾರದಂದು ನವೀಕೃತ ನಾಗಾಲಯದಲ್ಲಿ ಸಪರಿವಾರ ನಾಗದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜರುಗಿತು.
ಇಂದು ದುರ್ಗಾ ಆದಿಶಕ್ತಿ ದೇವಿಗೆ ಅಷ್ಟೋತ್ತರ ಶತಬ್ರಹ್ಮಕುಂಭಾಭಿಷೇಕ ರಂಗ ಪೂಜಾ ಮಹೋತ್ಸವ ಹಾಗೂ ಬಲಿ ಉತ್ಸವ ನಡೆಯಲಿರುವುದು.
ಶನಿವಾರದಂದು ಮಹಾಚಂಡಿಕಾಯಾಗ ಮತ್ತು ನಿರಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.