ಕುಂದಾಪುರದಲ್ಲಿ ಎಂಐಟಿಕೆ ಪ್ರೀಮಿಯರ್ ಲೀಗ್; ಹಾವ್ಕ್ ಐಸ್ ತಂಡಕ್ಕೆ ಜಯ.

ಕುಂದಾಪುರ: ಎಂಐಟಿ ಕುಂದಾಪುರದಲ್ಲಿ ಎಂಪಿಎಲ್ 2025 (ಎಂ ಐ ಟಿ ಕೆ ಪ್ರೀಮಿಯರ್ ಲೀಗ್) ಆಯೋಜಿಸಲಾಗಿತ್ತು. ಇದರಲ್ಲಿ 8 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಹಾವ್ಕ್ ಐಸ್ ತಂಡವು ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ವಿಜೇತರಾದರು. ಹುಡುಗಿಯರ ಆರು ತಂಡಗಳಿದ್ದು, ಫೀನಿಕ್ಸ್ ತಂಡ ವಿಜೇತರು ಮತ್ತು ಹಾಕ್ ಐಸ್ ರನ್ನರ್ಸ್ ಆಗಿ ಹೊರಹೊಮ್ಮಿದರು.

ಫೈನಲ್ಸ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿಕಾಸ್ ಬಿ ಪೂಜಾರಿ, ಬೆಸ್ಟ್ ಬೌಲರ್ ರಜಿಕ್, ಬೆಸ್ಟ್ ಬ್ಯಾಟ್ಸ್‌ಮನ್ ಅಖಿಲ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಸುಜಲ್ ಎಸ್ ಶೆಟ್ಟಿ ವಿಶೇಷ ಕ್ರೀಡಾಪ್ರತಿಭೆ ಮೆರೆದರು. ಈ ಪಂದ್ಯಾಟವನ್ನು ಕಾಲೇಜಿನ ವಿದ್ಯಾರ್ಥಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಪೂಜಾರಿ, ಹಾಗೂ ದೈಹಿಕ ನಿರ್ದೇಶ ಡಾ . ನವೀನ್ ಕುಮಾರ್ ಸಂಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅಥಿತಿಗಳಾದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ದೀಪಕ್ ಕುಮಾರ್, ಮ್ಯಾನೇಜರ್ ವಿವೇಕಾನಂದ ಬಸ್ರೂರು, ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಶ್ರೀ ಪ್ರಸಾದ್ , ನಿರ್ಣಾಯಕರಾದ ವಿಘ್ನೇಶ್ ಕೊಲ್ಕೆರೆ ಯೋಗೀಶ್ ಗೋಳಿ ಯಂಗಡಿ ಮತ್ತು ಕಾಮೆಂಟರಿಯಲ್ಲಿ ಪ್ರವೀಣ್ ಮಾರ್ಗೋಳಿ ಭಾಗವಹಿಸಿದ್ದರು. ಈ ಪಂದ್ಯಾಟಕ್ಕೆ ಸಿವಿಲ್ ಕಂಟ್ರಾಕ್ಟರ್ ಶ್ರೀ ಪ್ರವೀಣ್, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಯುವಮೇರಿಡಿಯನ್ ಮತ್ತು ಎಂ ಐ ಟಿ ಕೆ ಅಧ್ಯಾಪಕರಾದ ಶ್ರೀ ಗಗನ್ ಅವರು ಸಹಕರಿಸಿದ್ದರು.