ಕಾಪು: ಮಯೂರ ಹೋಟೆಲ್ ಮಾಲೀಕ ಸಂತೋಷ್ ರಘುರಾಮ್ ಶೆಟ್ಟಿ ನಿಧನ

ಕಾಪು: ಇಲ್ಲಿನ ಮಯೂರ ಹೋಟೆಲ್ ಮಾಲೀಕ ಸಂತೋಷ್ ರಘುರಾಮ್ ಶೆಟ್ಟಿ (52) ಕಳತ್ತೂರು ಅವರು ಅನಾರೋಗ್ಯದಿಂದ ಇಂದು ಮಧ್ಯಾಹ್ನ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಳತ್ತೂರು ಬರ್ಪಾಣಿಯ ಮಯೂರ ಹೌಸ್ ನಲ್ಲಿ ಇಂದು ರಾತ್ರಿ 8.30ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ.