ಮಣಿಪಾಲ: ಜ. 12ರಿಂದ ‘ಕೆನರಾ ಉತ್ಸವ’; ಆಕರ್ಷಕ ದರದಲ್ಲಿ ಗೃಹ ಉತ್ಪನ್ನಗಳ ಮಾರಾಟ ಮೇಳ

ಮಣಿಪಾಲ: ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ವತಿಯಿಂದ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಕೆನರಾ ಉತ್ಸವ’ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಆವರಣದಲ್ಲಿ (ಈ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ) ಜನವರಿ 12 ಮತ್ತು 13ರಂದು ನಡೆಯಲಿದೆ.

ಈ ಮೇಳದಲ್ಲಿ ಜಿಲ್ಲೆಯ 25ಕ್ಕೂ ಹೆಚ್ಚಿನ ಮಹಿಳಾ ತಂಡದ ಉದ್ಯಮಿಗಳು ಪಾಲ್ಗೊಳ್ಳಲಿದ್ದು, ಅವರು ತಯಾರಿಸಿದ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ಬ್ಯಾಂಕ್ ವತಿಯಿಂದ ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳಾದ ರೆಡಿಮೇಡ್ ಬಟ್ಟೆಗಳು, ಹಪ್ಪಳ, ಉಪ್ಪಿನಕಾಯಿ, ಮೇಣದ ಬತ್ತಿ, ಮಸಾಲೆ ಪದಾರ್ಥಗಳು, ಕರಕುಶಲ ವಸ್ತುಗಳು, ಫಿನಾಯಿಲ್ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳ ನಡೆಯಲಿದೆ. ಆಕರ್ಷಕ ದರದಲ್ಲಿ ವಸ್ತುಗಳ ಮಾರಾಟ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ಕೆನರಾ ವೃತ್ತ ಕಚೇರಿ ಮಣಿಪಾಲದ ಮಹಾಪ್ರಬಂಧಕ ರಮಾ ನಾಯ್ಕ್ ತಿಳಿಸಿದ್ದಾರೆ.