ಉಡುಪಿ: ಮಣಿಪಾಲ ಎಂಐಟಿ ಕಾಲೇಜಿನ 35 ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗ ಲಭಿಸಿದ್ದು, ವಾರ್ಷಿಕ 44 ಲಕ್ಷ ರೂ. ಗಳ ಪ್ಯಾಕೇಜ್ ದೊರೆಯಲಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾದ ಅತೀ ದೊಡ್ಡ ಮೊತ್ತದ ಸಂಬಳದ ಪ್ಯಾಕೇಜ್ ಇದಾಗಿರುವುದಾಗಿ ಎಂಐಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಕ್ರೋಸಾಫ್ಟ್ ಅಲ್ಲದೆ ಅಡೋಬ್, ಅಮೆಜಾನ್, ಬಜಾಜ್ ಫಿನ್ಸರ್ವ್, ಚಾರ್ಜ್ಬೀ, ಸಿಸ್ಕೊ ಸಿಸ್ಟಮ್ಸ್, ಸಿಟ್ರಿಕ್ಸ್ ಆರ್ ಆ್ಯಂಡ್ ಡಿ, ಕ್ಲೌಡೆರಾ, ವೆಸ್ಟರ್ನ್ ಡಿಜಿಟಲ್ನಂತಹ ಪ್ರತಿಷ್ಠಿತ ಕಂಪೆನಿಗಳು ವರ್ಚುವಲ್ ಮೂಲಕ ಕ್ಯಾಂಪಸ್ ಸಂದರ್ಶನ ನಡೆಸುತ್ತಿವೆ. 2021-22ನೇ ಸಾಲಿನ ಪ್ರಥಮ ಹಂತದ ಪ್ಲೇಸ್ ಮೆಂಟ್ ಇದಾಗಿದ್ದು ಪ್ಲೇಸ್ ಮೆಂಟ್ ಪ್ರಕ್ರಿಯೆ ನಡೆಯುತ್ತಿದೆ.
292 ವಿದ್ಯಾರ್ಥಿಗಳು ಪ್ಲೇಸ್ ಮೆಂಟ್ ಮತ್ತು ಇಂಟರ್ನ್ ಶಿಪ್ ಗೆ ಆಯ್ಕೆಯಾಗಿದ್ದು ಸರಾಸರಿ ವಾರ್ಷಿಕ ವೇತನ 18.2 ಲಕ್ಷ ರೂಪಾಯಿ ಆಗಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಸದಾ ಉತ್ತೇಜನ ನೀಡುತ್ತಿದ್ದೇವೆ ಎಂದು ನಿರ್ದೇಶಕ ಡಾ. ಅನಿಲ್ ರಾಣಾ ಹರ್ಷ ವ್ಯಕ್ತಪಡಿಸಿದ್ದಾರೆ.