ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ವತಿಯಿಂದ ರೋಟರಿ ಜಾಗತಿಕ ಅನುದಾನದಿಂದ ಇದೇ ಆಗಸ್ಟ್ 21ರಿಂದ ‘ರೋಟರಿ ಮಾಹೆ ಸ್ಕಿನ್ ಬ್ಯಾಂಕ್’ (ಚರ್ಮದ ನಿಧಿ) ಆರಂಭವಾಗಲಿದೆ.
ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ (ಎಂಇಎಂಜಿ) ಯ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಮಾಹೆ ಮಣಿಪಾಲದ ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾ. ಎಂ ಡಿ ವೆಂಕಟೇಶ್, ರೋಟರಿ ಜಿಲ್ಲೆ RID 3182 ಯ ಗವರ್ನರ್ ಎಂ.ಜಿ ರಾಮಚಂದ್ರ ಮೂರ್ತಿ, ಗೌರವ ಅತಿಥಿಗಳಾಗಿ ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ರೋಟರಿ ಸ್ಕಿನ್ ಬ್ಯಾಂಕ್ ನ ಅಂತರಾಷ್ಟ್ರೀಯ ಪ್ರಾಯೋಜಕರಾದ ದಿನೇಶ್ ನಾಯಕ್ ಮತ್ತು ಡಾ ವಸಂತ್ ಪ್ರಭು, ಡಿ ಆರ್ ಎಫ್ ಮುಖ್ಯಸ್ಥರಾದ ಡಾ. ಪಿ ನಾರಾಯಣ, ಮುಂಬಯಿಯ ರಾಷ್ಟ್ರೀಯ ಸುಟ್ಟ ಕೇಂದ್ರದ ನಿರ್ದೇಶಕ ಡಾ. ಸುನಿಲ್ ಎಂ ಕೇಶ್ವಾನಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿಗಳಾ ಸಿ.ಜಿ. ಮುತ್ತಣ್ಣ ಭಾಗವಹಿಸಲಿದ್ದಾರೆ ಎಂದು ಮಾಹೆ ಮಣಿಪಾಲದ ಕುಲಸಚಿವಾರಾದ ಡಾ. ನಾರಾಯಣ ಸಭಾಹಿತ್, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ನ ಅಧ್ಯಕ್ಷ ಗಣೇಶ್ ನಾಯಕ್ ತಿಳಿಸಿದ್ದಾರೆ.
ರೋಟರಿ ಮಾಹೆ ಸ್ಕಿನ್ ಬ್ಯಾಂಕ್ (ಚರ್ಮದ ನಿಧಿ)” ಮಾಹೆ ಮಣಿಪಾಲ ಮತ್ತು ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ನ ಜಂಟಿ ಯೋಜನೆಯಾಗಿದ್ದು, ಮಣಿಪಾಲ, ಉಡುಪಿ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಸುಟ್ಟ ಗಾಯಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಈ ಕೇಂದ್ರದಿಂದ ಸಮುದಾಯಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ.
ಭಾರತದಲ್ಲಿ ಪ್ರತಿ ವರ್ಷ ಸರಾಸರಿ ಏಳು ಮಿಲಿಯನ್ ಜನರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರಿಗೆ ಸುಟ್ಟ ಚರ್ಮವನ್ನು ಬದಲಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಚರ್ಮವು ಶೇ. 30-40ಕ್ಕಿಂತ ಹೆಚ್ಚು ಹಾನಿಗೊಳಗಾದಾಗ, ಅದನ್ನು ಆರೋಗ್ಯಕರ ಚರ್ಮದಿಂದ ಬದಲಾಯಿಸದಿದ್ದರೆ ಅದು ಮಾರಕವಾಗಬಹುದು ಎಂದು ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಸಿ ಶ್ರೀಕುಮಾರ್ ಹೇಳಿದ್ದಾರೆ.