ಮಂಗಳೂರು: ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ಪ್ರಯುಕ್ತ ಶ್ರೀ ದೇವರ ಅವಭ್ರತ ( ಓಕುಳಿ ) ಮಹೋತ್ಸವ ವಿಜೃಂಭಣೆಯಿಂದ ಜರಗಿತು.
ಸರ್ವಾಭರಣ ಭೂಷಿತ ಶ್ರೀ ವೀರ ವೆಂಕಟೇಶ್ ಹಾಗೂ ಶ್ರೀನಿವಾಸ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಸಂತ ಮಂಟಪಕ್ಕೆ ತಂದು ಬಳಿಕ ವಸಂತ ಮಂಟಪದಲ್ಲಿ ವಿಶೇಷ ಪೂಜೆ , ಅಷ್ಟಾವಧಾನ ಸೇವೆ ನಂತರ ಶ್ರೀ ಗಳವರಿಂದ ಪ್ರವಚನ ನಡೆಯಿತು .
ಶ್ರೀ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿರಿಸಿ ಐದು ಪೇಟೆ ಉತ್ಸವ ಭಾವುಕ ಭಗವತ್ ಭಕ್ತರ ಭುಜ ಸೇವೆ ಯೊಂದಿಗೆ ಜರಗಿತು.
ಪುರುಷರು ಮತ್ತು ಮಕ್ಕಳು ಅವಭ್ರತ ಮಹೋತ್ಸವದಲ್ಲಿ ಗುಲಾಬಿ, ಅರಸಿನ ಬಣ್ಣದ ನೀರಿನೊಂದಿನಿಗೆ ಆಟವಾಡಿದರು.
ಶ್ರೀ ದೇವರ ಪೇಟೆ ಉತ್ಸವ ರಥಬೀದಿ, ನಂದ ದೀಪ, ಉಮಾ ಮಹೇಶ್ವರ ದೇವಸ್ಥಾನ ರಸ್ತೆ , ಕೆಳಗಿನ ರಥ ಬೀದಿ, ಡೋಂಗೇರಕೇರಿ, ಚಾಮರಗಲ್ಲಿ ಮೂಲಕ ವಿ ಟಿ ರಸ್ತೆಯ ಮೂಲಕ ಟ್ಯಾಂಕ್ ಕಾಲೋನಿ ಯಲ್ಲಿರುವ ಶ್ರೀ ಶ್ರೀನಿವಾಸ ನಿಗಮಗಮ ಪಾಠಶಾಲೆಯಲ್ಲಿರುವ ಪುಷ್ಕರಣಿಯಲ್ಲಿ ಶ್ರೀ ದೇವರ ಅವಬೃತ ಸ್ನಾನ ನಡೆಯಿತು.
ದೇವಳಕ್ಕೆ ಉತ್ಸವ ಮರಳಿದ ಬಳಿಕ ಧ್ವಜಾ ಅವರೋಹಣ ಬಳಿಕ ಮಹೋತ್ಸವ ಸಮಾಪನ ಗೊಂಡಿತು.