ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ: ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಉಡುಪಿ: ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆಯೋಜಿಸಿರುವ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಈ ಪ್ರದರ್ಶನದಲ್ಲಿ ಉಡುಪಿಯ ವೈದ್ಯೆ ಡಾ.ಚರಿಷ್ಮಾ ಶೆಟ್ಟಿ, ಉಡುಪಿಯ ಚಿಪ್ಸಿ ಸಿಇಓ ಶಾಂಭವಿ ಭಂಡಾರ್ಕರ್, ವಿದ್ಯಾ ಸರಸ್ವತಿ ಚಿನ್ನ ಮತ್ತು ವಜ್ರಾ ಭರಣಗಳ ಸಂಗ್ರಹಗಳ ಪ್ರದರ್ಶನವನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಗ್ಲೋಬಲ್ ಮಿಸ್ ಇಂಟರ್‌ನ್ಯಾಶನಲ್ ಇಂಡಿಯಾ ಯುನಿವರ್ಸಿ ಸೆಂಕೆಂಡ್ ರನ್ನರ್ ಸ್ಪೂರ್ತಿ ಡಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ, ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.
ಯಶೋಧಾ ಕೇಶವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮೈನ್’ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು, ‘ಡಿವೈನ್’ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ. ‘ಪ್ರಶಿ’ಯದಲ್ಲಿ ರುಬಿ, ಎಮರಾಲ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು, ‘ಎಥಿನಿಕ್ಸ್’ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ‘ಎರ’ ಆನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ, ‘ಸ್ಟಾರ್ಲೆಟ್’ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ.
ಈ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಡಿ. 12ರ ವರೆಗೆ ನಡೆಯಲಿದೆ.