ಕುಂದಾಪುರ: ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿರುವ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟುಡಿಯೋದ ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆಯಾಗಿದೆ.
ರಾತ್ರಿ ಸುಮಾರು 12.30ರ ಆಸುಪಾಸು ಸ್ಟುಡಿಯೋದ ಹಿಂಬದಿ ಮೇಲ್ಛಾವಣಿಯ ಹಂಚುಗಳನ್ನು ಸರಿಸಿ ಒಳ ಪ್ರವೇಶಿಸಿದ ಕಳ್ಳ ಡ್ರಾವರ್ ನಲ್ಲಿದ್ದ ಸುಮಾರು 2ಸಾವಿರದಷ್ಟು ನಗದು ಹಾಗೂ ಒಂದೆರಡು ಪೆನ್ ಡ್ರೈವ್ ಗಳನ್ನು ದೋಚಿದ್ದಾನೆ.
ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡೊಂದನ್ನು ಮಾಡಿನ ಮೇಲೆ ಬಿಟ್ಟು ಹೋಗಿದ್ದಾನೆ. ಸ್ಟುಡಿಯೋದಲ್ಲಿ ಆಳವಡಿಸಿರುವ ಸಿಸಿ ಫೂಟೇಜ್ ನಲ್ಲಿ ಕಳ್ಳನ ಸಂಪೂರ್ಣ ಚಲನವಲಗಳು ದಾಖಲಾಗಿದ್ದು, ದೃಶ್ಯದಲ್ಲಿ ಮುಖ ಚಹರೆ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೇಲ್ನೋಟಕ್ಕೆ ಪಕ್ಕದಲ್ಲಿರುವ ವೈನ್ ಶಾಪ್ ಗೆ ಬರುತ್ತಿದ್ದ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೆಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.