ಕೊಡವೂರು ಶಂಕರನಾರಾಯಣ ದೇಗುಲ: ರಾಶಿಪೂಜಾ ಮಹೋತ್ಸವ ಸಂಪನ್ನ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ರಾಶಿಪೂಜಾ ಮಹೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು.
ದೇಗುಲದ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಹಾಗೂ ತಂಡದವರ ನೇತೃತ್ವದಲ್ಲಿ ಗುರುವಾರ ಸುರ್ಯೋದಯದಿಂದ ಶುಕ್ರವಾರ ಬೆಳಿಗ್ಗೆ ಸುರ್ಯೋದಯವರೆಗೆ 24 ಗಂಟೆ ಜರಗಿತು.

ರಾಶಿಪೂಜಾ ಮಹೋತ್ಸವವು ವಾದ್ಯ, ಸಂಗೀತ, ಭರತನಾಟ್ಯ, ಯಕ್ಷಗಾನ, ಭಜನೆ, ಕೀರ್ತನೆ ಅಷ್ಟಾವಧಾನ ಪೂಜೆಯೊಂದಿಗೆ ಸಂಪನ್ನಗೊಂಡಿತು.
ಆರೂರು ಶ್ರೀ ವಿಷ್ಣುಮೂರ್ತಿ ತಂಡದಿಂದ ನಾಮ ಸಂಕೀರ್ತನೆ ನಡೆಯಿತು. 12 ಹರಿವಾಣದಲ್ಲಿ 12 ರಾಶಿಗಳ ಉಬ್ಬು ಚಿತ್ರ ರಚಿಸಿ ಶಂಕರನಾರಾಯಣ ದೇವರನ್ನು ಅಲಂಕರಿಸಲಾಗಿತ್ತು.

ರಾಶಿ ಪೂಜಾ ಮಹೋತ್ಸವದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಧ್ಯಾಹ್ನ, ರಾತ್ರಿ 18 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.‌ ರಾತ್ರಿಯ ಧಾರ್ಮಿಕ ಸಭೆಯಲ್ಲಿ ಪಲಿಮಾರು ಮಠದ ವರ್ಷದ ವಿದ್ಯಾಧೀಶ ಶ್ರೀಪಾದರು ರಾಶಿಪೂಜೆಯ ಪುಸ್ತಕ ಬಿಡುಗಡೆಗೊಳಿಸಿ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ರಾಶಿಪೂಜೆ ಉತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ಭಾಸ್ಕರ ಪಾಲನ ಬಾಚನಬೈಲು, ಸುಧಾ ಎನ್. ಶೆಟ್ಟಿ ರಾಜ ಎ. ಸೇರಿಗಾರ, ಚಂದ್ರಕಾಂತ್ ಪುತ್ರನ್.

ನಗರಸಭಾ ಸದಸ್ಯ ವಿಜಯ ಕೊಡವೂರು, ಬಾಬ ಕೆ., ಸುಧಾ ಎನ್. ಶೆಟ್ಟಿ, ಬೇಬಿ ಎಸ್. ಮೆಂಡನ್, ಭಕ್ತವೃಂದದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಾವತಿ ಎಸ್, ರಾಶಿಪೂಜಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಭಜನ ಮಂಡಳಿಗಳು, ಸಂಘ ಸಂಸ್ಥೆಗಳು, ಮಹಿಳಾ ಮಂಡಳಿಗಳು ಸೇರಿದಂತೆ ಮೀನುಗಾರ ಮುಖಂಡರು, ಪ್ರಮುಖ ಗಣ್ಯರು ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.