ಕಾರ್ಕಳ: ಬೆಂಗಳೂರು ಬಸವನಗುಡಿ ನಿವಾಸಿ ನಿವೃತ್ತ ಇಸ್ರೋ ವಿಜ್ಞಾನಿ ರತ್ನಾಕರ ಎಸ್.ಸಿ (63) ಅವರು ಸ್ವರ್ಣ ನದಿಗೆ ಸ್ನಾನಕ್ಕೆ ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.
ರತ್ನಾಕರ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಗೋವಿಂದೂರು ಎಂಬಲ್ಲಿರುವ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸ್ತವ್ಯ ಇದ್ದರು. ಮಾರ್ಚ್ 3ರಂದು ಬೆಳಿಗ್ಗೆ 10.40ಕ್ಕೆ ಆಶ್ರಮದ ಬಳಿ ಇರುವ ಸ್ವರ್ಣ ನದಿಗೆ ಸ್ನಾನಕ್ಕೆ ಹೋದವರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು.
ಅವರ ಮೃತ ದೇಹ ಅಂದು ಸಂಜೆ 4 ಗಂಟೆಗೆ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.