ಕಾರ್ಕಳ: ಕಾಬೆಟ್ಟು ಸಂದಿಪ್ ಎಲೆಕ್ಟಿಲ್ಸ್ ಮತ್ತು ಡೆಕೋರೇಷನ್ ಮಾಲಕ ಹಾಡಿಮನೆ ಕೃಷ್ಣಾನಂದ ಶೆಣೈ (55 ವರ್ಷ) ನ. 14ರಂದು ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು. ಮೃತರು ಪತ್ನಿ, ಇರ್ವರು ಪುತ್ರಿಯರನ್ನು ಅಗಲಿದ್ದಾರೆ.
ಕೃಷ್ಣಾನಂದ ಶೆಣೈ ಅವರು ಕಾಬೆಟ್ಟು ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿಯ ಮಾಜಿ ಅದ್ಯಕ್ಷರಾಗಿ, ಲೈಟಿಂಗ್ & ಡೆಕೋರೇಷನ್ ಕಾರ್ಕಳ ವಲಯದ ಮಾಜಿ ಅದ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸರಳ ಸಜ್ಜನರಾಗಿದ್ದರು.


















