ಕಾರ್ಕಳ ಕ್ರೈಸ್ಟ್ಕಿಂಗ್: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೀತಗಾಯನ ಸ್ಪರ್ಧೆಯಲ್ಲಿ ರೋವರ‍್ಸ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಜಿಲ್ಲಾ ಸಂಸ್ಥೆ
ಉಡುಪಿ ಇದರ ವತಿಯಿಂದ ಉಡುಪಿಯ ಮಣಿಪಾಲದ ಪ್ರಗತಿ
ನಗರದಲ್ಲಿರುವ ಡಾ. ವಿ.ಎಸ್.ಆಚಾರ್ಯ ತರಬೇತಿ ಕೇಂದ್ರದಲ್ಲಿ
ನಡೆದ ಉಡುಪಿ ಜಿಲ್ಲಾಮಟ್ಟದ ರೋವರ‍್ಸ್ ಮತ್ತು ರೇಂಜರ್ಸ್ ವಿಭಾಗದ
ಗೀತಗಾಯನ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ರೋವರ‍್ಸ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ರೋರ‍್ಸ್ಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಆರ್ಯನ್ ಕೋಟ್ಯಾನ್, ನಿಹಾಲ್, ಮೊಹಮ್ಮದ್ ರಿಜಾನ್, ವೀಕ್ಷಿತ್,
ಮೊಹಮ್ಮದ್ ಝಮೀರ್, ಪ್ರಥಮ ವಾಣಿಜ್ಯ ವಿಭಾಗದ ಶ್ರಧಿಕ್
ತಂಡವನ್ನು ಪ್ರತಿನಿಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.