ಮಂಗಳೂರು: ಕರಾವಳಿಯ ಕಂಬಳ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದ ಬೋಳಂತೂರು ಗುತ್ತು ಗಂಗಾಧರ ರೈ ಅವರ ಕೋಣ ಚ್ಯಾಂಪಿಯನ್ ಕಾಟಿ ಸೋಮವಾರ ಬೆಳಿಗ್ಗೆ ವಯೋಸಹಜವಾಗಿ ಅಸುನೀಗಿದೆ.
ಕಳೆದ ಏಳೆಂಟು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ನಿವೃತ್ತಿ ಹೊಂದಿದ್ದ ಕಾಟಿಗೆ ಸುಮಾರು 28 ವರ್ಷ ವಯಸ್ಸಾಗಿತ್ತು.
ಬೋಳಂತೂರು ಕಾಟಿ ಹಗ್ಗ ಕಿರಿಯ, ಹಗ್ಗ ಹಿರಿಯ ಹೀಗೆ ವಿವಿಧ ವಿಭಾಗಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿತ್ತು. ಅಲ್ಲದೇ ಈದು ಪಾಡ್ಯಾರ ಮನೆ ಅಶೋಕ್ ಕುಮಾರ್ ಜೈನ್ ಅವರು ಓಡಿಸುವ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ ಚ್ಯಾಂಪಿಯನ್ ಆಗಿ ಮರೆದಿತ್ತು.
ಕಾಟಿಯ ಸಾಧನೆಗೆ ವಿವಿದೆಡೆ ಸನ್ಮಾನ ಮಾಡಲಾಗಿತ್ತು.
ಕಂಬಳದ ಕೋಣಗಳ ಪೈಕಿ ಅತೀ ಹಿರಿಯ ವಯಸ್ಸಿನ ಕೋಣ ಇದ್ದಾಗಿದ್ದು, ಸದ್ಯ ಬೋಳಂತೂರು ಗುತ್ತು ಮನೆಯಲ್ಲೇ ಸಾಕಲಾಗುತ್ತಿತ್ತು.