ಉಡುಪಿ ಚಿಪ್ಸಿ ಐಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಗುಲಾಬಿ, ಚಾಕೊಲೇಟ್ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.
ಸಂಸ್ಥೆ ಆರಂಭವಾಗಿನಿಂದ ಮಹಿಳೆಯರು ಹಾಗೂ ಪುರುಷರ ಮಧ್ಯೆ ಸಮಾನತೆ ಕಾಯ್ದುಕೊಳ್ಳುವ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ವೈವಿಧ್ಯತೆ ಮತ್ತು ಸೇರ್ಪಡೆ (D&I) ನೀತಿಗಳು, ಕಾರ್ಯಕ್ರಮಗಳು ಅಥವಾ ಹೆಡ್ಕೌಂಟ್ಗಳಿಗಿಂತ ಹೆಚ್ಚಿನದಾಗಿದೆ ಮತ್ತು Chipsy IT Services Pvt Ltd 10 ವರ್ಷಗಳ ಹಿಂದೆ ಉಡುಪಿಯಲ್ಲಿ ಪ್ರಾರಂಭವಾದಾಗಿನಿಂದ ಈ ಪರಿಕಲ್ಪನೆಯನ್ನು ದೃಢವಾಗಿ ನಂಬಿದೆ.
ಕಂಪನಿಯ ಸಿಇಒ ಶಾಂಭವಿ ಭಂಡಾರ್ಕರ್ ಮಾತನಾಡಿದರು.