ನವದೆಹಲಿ: ನಾಲ್ಕು ವರ್ಷಗಳ ಬಳಿಕ ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಹಾರಾಟ ಆರಂಭವಾಗಿದೆ. ಈ ಕುರಿತು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ವಕ್ತಾರೆ ಯು ಜಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಚೀನಾ ಮತ್ತು ಭಾರತದ ನಡುವೆ ನೇರ ವಿಮಾನ ಹಾರಾಟ ಈಗ ಸಾಧ್ಯವಾಗಿದೆ.
ಕೋಲ್ಕತ್ತ–ಗುವಾಂಗ್ಝೌ ವಿಮಾನ ಭಾನುವಾರ (ಅ.26) ಹಾರಾಟ ನಡೆಸಿದೆ.ಶಾಂಘೈ– ದೆಹಲಿ ನಡುವೆ ನ.9ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ದೆಹಲಿ ಮತ್ತು ಶಾಂಘೈ ನಡುವೆ ವಾರದಲ್ಲಿ ಮೂರು ವಿಮಾನ ಸಂಚರಿಸಲಿವೆ’ ಎಂದು ತಿಳಿಸಿದ್ದಾರೆ.
ಕೋವಿಡ್–19 ಮತ್ತು 2020ರ ಗಾಲ್ವಾನ್ ಕಣಿವೆ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿತ್ತು. ಎರಡೂ ದೇಶಗಳ ನಾಯಕರ ಮಾತುಕತೆ ಬಳಿಕ 2024ರಲ್ಲಿ ಗಡಿ ನಿಯಂತ್ರಣಾ ರೇಖೆಯಲ್ಲಿ ಗಸ್ತು ತಿರುಗಲು ಒಪ್ಪಿಗೆ ನೀಡಲಾಗಿತ್ತು. ಆದರೆ ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕಿರಲಿಲ್ಲ. ಈಗ ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಹಾರಾಟ ಆರಂಭವಾಗಿದೆ.


















