ನವದೆಹಲಿ: ಅಡುಗೆ ಅನಿಲ (ಎಲ್ ಪಿಜಿ ಸಿಲಿಂಡರ್) ಬೆಲೆಯಲ್ಲಿ ಮತ್ತೆ ₹25 ರೂಪಾಯಿ ಎರಿಕೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ 859 ರೂಪಾಯಿ 5 ಪೈಸೆಯಾಗಿದೆ. ನಿನ್ನೆಯವರೆಗೆ 834 ರೂಪಾಯಿ 50 ಪೈಸೆಯಾಗಿತ್ತು. ಕಳೆದ ಜುಲೈ 1ರಂದು ಎಲ್ ಪಿಜಿ ಸಿಲೆಂಡರ್ ಬೆಲೆ 25 ರೂಪಾಯಿ 50 ಪೈಸೆ ಹೆಚ್ಚಳವಾಗಿತ್ತು.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್ ಪಿಜಿ ಸಿಲೆಂಡರ್ ಬೆಲೆ 862 ರೂಪಾಯಿ 50 ಪೈಸೆಯಾಗಿದೆ. ಮುಂಬೈನಲ್ಲಿಯೂ ಸಹ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ದರ ಈಗ 859.5 ರೂ, ನಿನ್ನೆಯವರೆಗೆ 834.50 ರೂ ಆಗಿತ್ತು. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್ಗೆ ರೂ 861 ರಿಂದ ರೂ 886 ಕ್ಕೆ ಏರಿಕೆಯಾಗಿದೆ.
ಚೆನ್ನೈನ ಎಲ್ಪಿಜಿ ಸಿಲಿಂಡರ್ಗಾಗಿ ಇಂದಿನಿಂದ 875.50 ರೂಗಳನ್ನು ಪಾವತಿಸಬೇಕಾಗುತ್ತದೆ, ಅದು ನಿನ್ನೆಯವರೆಗೆ 850.50 ರೂಪಾಯಿ ಆಗಿತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ ಎಲ್ಪಿಜಿ ಸಿಲಿಂಡರ್ಗಾಗಿ 897.5 ರೂ. ಪಾವತಿಸಬೇಕಾಗುತ್ತದೆ.