ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಅಲರ್ ಇನ್ನೋವೇಶನ್ ಸಹಯೋಗದೊಂದಿಗೆ ದಿನಾಂಕ 22 ನವೆಂಬರ್ 2025 ರಂದು “ಅಲರ್ ಸೆಂಟರ್ ಆಫ್ ಎಕ್ಸಲೆನ್ಸ್” ಅನ್ನು ಉದ್ಘಾಟಿಸಲಾಯಿತು.
ಇದು ಸಂಸ್ಥೆಯ ನಾವೀನ್ಯತೆ ಮತ್ತು ಉದ್ಯಮ – ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಈ ಕೇಂದ್ರವು ಪ್ರಾಯೋಗಿಕ ಸಂಶೋಧನೆ, ಮೂಲಮಾದರಿ ಅಭಿವೃದ್ಧಿ ಮತ್ತು ಉದ್ಯಮ – ಶೈಕ್ಷಣಿಕ ಸಹಯೋಗವನ್ನು ಸಕ್ರಿಯಗೊಳಿಸುವ ಮೂಲಕ ನಾವಿನ್ಯತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಹಾಗೂ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡುತ್ತದೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಶೈಕ್ಷಣಿಕ ಡೀನ್ ಡಾ. ನಾಗರಾಜ್ ಭಟ್, ಮಣಿಪಾಲ ಡಾಟ್ ನೆಟ್ನ ನಿರ್ದೇಶಕರಾದ ಡಾ. ಯು ಸಿ ನಿರಂಜನ್,
ಎಂಜಿಯಾನ ಕನ್ಸಲ್ಟೆನ್ಸಿ ಬೆಂಗಳೂರು ಇದರ ಸಂಸ್ಥಾಪಕಿಯಾದ ತಿಲೋತ್ತಮ ಶ್ರೀನಿವಾಸ್ ಮತ್ತು ಅಲರ್ ಇನ್ನೋವೇಶನ್ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸಚಿನ್ ಭಟ್ ಇವರು ಉಪಸ್ಥಿತರಿದ್ದರು.


















