ಭುವನೇಶ್ವರ: ಮುಂದಿನ 10 ವರ್ಷಗಳವರೆಗೆ ಪುರುಷರು ಹಾಗೂ ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ಒಡಿಶಾ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ತಿಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತೀಯ ಹಾಕಿ ಆಟಗಾರರಿಗೆ ತಲಾ ₹10 ಲಕ್ಷ ಬಹುಮಾನ ನೀಡಿದರು.
2018ರಿಂದ ಎರಡೂ ತಂಡಗಳ ಪ್ರಾಯೋಜಕತ್ವವನ್ನು ಒಡಿಶಾ ವಹಿಸಿಕೊಂಡಿದೆ. ಇನ್ನೂ 10 ವರ್ಷಗಳವರೆಗೆ ಇದು ಮುಂದುವರೆಯಲಿದೆ ಎಂದು ಪಾಟ್ನಾಯಕ್ ಘೋಷಿಸಿದ್ದಾರೆ.