ಹೆಬ್ರಿ: ಸ್ನಾನ ಮಾಡಲು ಹೊಳೆಗಿಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಬ್ರಿಯ ಜರ್ವತ್ತು ಹೊಳೆಯಲ್ಲಿ ನಡೆದಿದೆ.
ಹೆಬ್ರಿಯ ಬೊಳಂಗಲ್ಲು ನಿವಾಸಿ ಸುಬ್ಬಣ್ಣ ನಾಯಕ್ ಅವರ ಪುತ್ರ ಕೃಷ್ಣಮೂರ್ತಿ ನಾಯಕ್ (30) ಮೃತ ಯುವಕ. ಈತ ಅವಿವಾಹಿತನಾಗಿದ್ದು, ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಕೃಷ್ಣಮೂರ್ತಿ ಎ. 21ರಂದು ಸ್ನಾನ ಮಾಡುವ ಸಲುವಾಗಿ ಮನೆಯ ಸಮೀಪದ ಹೊಳೆಗೆ ತೆರಳಿದ್ದನು. ಎಷ್ಟೊತ್ತಾದರೂ ಕೃಷ್ಣಮೂರ್ತಿ ಮನೆಗೆ ಬಾರದಿದ್ದಾಗ ಮನೆಯವರು ಹೊಳೆಯ ಬಳಿಗೆ ಹೋಗಿ ಹುಡುಕಾಟ ನಡೆಸಿದ್ದಾರೆ.
ಆಗ ಕೃಷ್ಣಮೂರ್ತಿಯ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.