ಪ್ರತಿಭಟನೆಗೆ ಪ್ರಚೋದನೆ ನೀಡಿದ ಪತ್ರಕರ್ತನಿಗೆ ಮರಣದಂಡನೆ

ಟೆಹ್ರಾನ್: ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪತ್ರಕರ್ತನೊಬ್ಬನನ್ನು ಇರಾನ್ ಸರ್ಕಾರ ಶನಿವಾರ ಗೆಲ್ಲಿಗೇರಿಸಿದೆ.

ಇರಾನ್ ದೇಶದ ರುಹೊಲ್ಲಾಹ್ ಝಾಮ್‌ ಎಂಬುವವನು ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಪತ್ರಕರ್ತ.

2017ರಲ್ಲಿ ದೇಶದ ಆರ್ಥಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ನಡೆದ ಪ್ರತಿಭಟನೆಯನ್ನು ತನ್ನ ಆನ್‌ಲೈನ್ ಚಾನಲ್‌ ಮೂಲಕ ಪ್ರಚಾರ ಮಾಡಿ ಜನರನ್ನು ಪ್ರಚೋದಿಸಿದ್ದ ಎಂಬ ಆರೋಪ ಈತನ ಮೇಲಿತ್ತು.

ಕಳೆದ ಜೂನ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಝಾಮ್‌ ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅದರಂತೆ ಇಂದು‌ ಮುಂಜಾನೆ ಆತನನ್ನು ಗಲ್ಲಿಗೇರಿಸಲಾಗಿದೆ.