ಮೇ 10ರಿಂದ 14 ದಿನ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್: ಏನಿದೆ?, ಏನಿಲ್ಲ.?

ಬೆಂಗಳೂರು: ರಾಜ್ಯದಲ್ಲಿ‌ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ನಿಯಂತ್ರಣ ಹೇರುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇ 10ರಿಂದ 24ರ ವರೆಗೆ 14 ದಿನ ಕರ್ನಾಟಕ ರಾಜ್ಯದಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಲಾಕ್ ಡೌನ್ ಅವಧಿಯಲ್ಲಿ ಏನಿದೆ?. ಏನಿಲ್ಲ:

*ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ.

*ನಿಗದಿತ ಅವಧಿಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವಂತಿಲ್ಲ.

*ಬೆಳಿಗ್ಗೆ 10 ಗಂಟೆ ನಂತರ ಯಾವುದೇ ರೀತಿಯ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.

*ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರಕ್ಕೆ ತಡೆ.

*ತುರ್ತು ಸೇವೆಗೆ ಮಾತ್ರ ಅವಕಾಶ

*ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶವಿದೆ.

*ಗಾರ್ಮೆಂಟ್ಸ್‌ ಗಳು ಕಾರ್ಯ ನಿರ್ವಹಿಸುವಂತಿಲ್ಲ.

*ಸರ್ಕಾರಿ, ಖಾಸಗಿ, ಟ್ಯಾಕ್ಸಿ, ಕ್ಯಾಬ್, ಆಟೋ, ಮೆಟ್ರೋ ಸಂಚಾರ ಇರುವುದಿಲ್ಲ.

*ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ತುರ್ತು ಸೇವೆಗಳು ಲಭ್ಯ.

*ಕೆಎಸ್’ಆರ್’ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ.

*ಹೊಟೇಲ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ, ಸರ್ವಿಸ್ ಇರುವುದಿಲ್ಲ.

*ಬಾರ್ ಹಾಗೂ ಮದ್ಯದಂಗಡಿಗಳಿಂದ ಮದ್ಯ ಪಾರ್ಸಲ್ ಕೊಂಡೊಯ್ಯಲು ಅವಕಾಶ.

*ಆಟದ ಮೈದಾನ, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಯೋಗ, ಮನೋರಂಜನಾ ಕೇಂದ್ರಗಳು ಬಂದ್.

*ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಿಗೆ ಸಾರ್ವಜನಿಕರ ಪ್ರವೇಶವಿಲ್ಲ. ಅರ್ಚಕರು ದೈನಂದಿನ ಪೂಜೆ ನಡೆಸಬಹುದು.

*ಬ್ಯಾಂಕ್’ಗಳು ಎಂದಿನಂತೆ ಕಾರ್ಯ ನಿರ್ವಹಿಸಬಹುದು‌.

*ಸರಕು ಸಾಗಾಣಿಕಾ ವಾಹನಗಳು ಎಂದಿನಂತೆ ಸಂಚರಿಸಬಹುದು.

*ಮದುವೆಗೆ ಅವಕಾಶ (ಗರಿಷ್ಠ 50 ಜನಗಳು ಮಾತ್ರ ಪಾಲ್ಗೊಳ್ಳಬಹುದು)