41 ವರ್ಷದ ಬಳಿಕ ಟೀಂ ಇಂಡಿಯಾದಲ್ಲಿ ಐದು ಆಟಗಾರರು ಒಂದೇ ಸಲ ಪದಾರ್ಪಣೆ

ಶ್ರೀಲಂಕಾ: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಆರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದ್ದು, 5 ಮಂದಿ ಪದಾರ್ಪಣೆ ಮಾಡಿದ್ದಾರೆ.

ಸಂಜು ಸ್ಯಾಮ್ಸನ್​, ನಿತೀಶ್ ರಾಣಾ, ಚೇತನ್​ ಸಕಾರಿಯಾ, ಕೆ. ಗೌತಮ್​, ರಾಹುಲ್​ ಚಹರ್​​ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಉಪನಾಯಕ ಭುವನೇಶ್ವರ್​ ಕುಮಾರ್ ಜಾಗಕ್ಕೆ ನವದೀಪ್​ ಸೈನಿ ಕಣಕ್ಕಿಳಿದಿದ್ದು, ಹಾರ್ದಿಕ್​ ಪಾಂಡ್ಯ ಭುವಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೀಮ್​ ಇಂಡಿಯಾದ 5 ಆಟಗಾರರು ಒಂದೇ ಸಲ ಪದಾರ್ಪಣೆ ಮಾಡಿದ್ದಾರೆ. 1980ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯಕ್ಕೆ ದಿಲೀಪ್​ ದೋಶಿ, ಕೀರ್ತಿ ಅಜಾದ್​, ರೋಜರ್ ಬಿನ್ನಿ, ಸಂದೀಪ್​ ಪಾಟೀಲ್​, ತಿರುಮಲೈ ಶ್ರೀನಿವಾಸನ್​ ಅವರು ಪದಾರ್ಪಣೆ ಮಾಡಿದ್ದರು.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ‌ ಇಂಡಿಯಾ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. ಈಗಾಗಲೇ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ 2-0 ಅಂತರದಲ್ಲಿ ಸರಣಿ ಗೆದ್ದಿರುವ ಟೀಮ್​ ಇಂಡಿಯಾ, ಕ್ವೀನ್​ ಸ್ವೀಪ್​​ ಮೇಲೆ ಕಣ್ಣಿಟ್ಟಿದೆ.