ಉಡುಪಿ: ಇಂದು ನಿಧನ ಹೊಂದಿದ ಹಿರಿಯ ನಟ ಹರೀಶ್ ರಾಯ್ ಮೂಲತಃ ಉಡುಪಿಯವರು. ಹರೀಶ್ ರಾಯ್ ಮೂಲ ಹೆಸರು ಹರೀಶ್ ಆಚಾರ್ಯ ಎಂಬುದು ಅನೇಕರಿಗೆ ಗೊತ್ತಿಲ್ಲ. ಉಡುಪಿಯ ಅಂಬಲಪಾಡಿ ಸಮೀಪ ಹರೀಶ್ ಆಚಾರ್ಯ ಅವರ ಮೂಲ ಮನೆ ಇದೆ. ನಾಳೆ ಉಡುಪಿಯಲ್ಲಿ ಹರೀಶ್ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಸಹೋದರ ಸತೀಶ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಸೇರಿದ ಹರೀಶ್ ರಾಯ್, ದಶಕಗಳ ಹಿಂದೆ ಪ್ರಖ್ಯಾತಿ ಪಡೆದಿದ್ದ ನೊವೆಲ್ಟಿ ಜ್ಯುವೆಲ್ಲರ್ಸ್ ನಡೆಸುತ್ತಿದ್ದರು. ಕೃಷ್ಣಮಠದ ರಥಬೀದಿ ಪರಿಸರದಲ್ಲಿ ನೊವೆಲ್ಟಿ ಪ್ರಖ್ಯಾತಿ ಪಡೆದಿತ್ತು. ಸದ್ಯ ಅಂಬಲಪಾಡಿ ಮೂಲ ಮನೆಯಲ್ಲಿ ತಾಯಿ ಮತ್ತು ಸಹೋದರ ವಾಸವಾಗಿದ್ದು ಸಹೋದರನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಹರೀಶ್ ರಾಯ್ ಸಹೋದರ ಅಥವಾ ತಾಯಿ ನಿಧನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬೆಂಗಳೂರಿನಿಂದ ಪಾರ್ಥಿವ ಶರೀರ ಬಂದ ಬಳಿಕ ಅಂತಿಮ ಸಂಸ್ಕಾರ ಇಲ್ಲೇ ನಡೆಸುವುದಾಗಿ ಕುಟುಂಬ ಮಾಹಿತಿ ನೀಡಿದ್ದು ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ.


















