ಬ್ರಿಟನ್ ನಿಂದ ಉಡುಪಿಗೆ ಎಂಟು ಮಂದಿಯ ಆಗಮನ: ಜಿಲ್ಲೆಗೂ ಕಾದಿದೆಯಾ ಬ್ರಿಟನ್ ವೈರಸ್ ಕಂಟಕ.?

ಉಡುಪಿ: ರಾಜ್ಯದಲ್ಲೂ ಬ್ರಿಟನ್ ವೈರಸ್ ನ ಆತಂಕ ಹೆಚ್ಚಾಗಿದ್ದು, ಬೆಂಗಳೂರಿನ ನಂತರ ಉಡುಪಿ ಜಿಲ್ಲೆಗೂ ಈ‌ ವೈರಸ್ ಕರಿಛಾಯೆ ಆವರಿಸುವ ಭೀತಿ‌ ಸೃಷ್ಟಿಯಾಗಿದೆ.

ಬ್ರಿಟನ್ ನಿಂದ ಏಂಟು ಮಂದಿ ಉಡುಪಿ ಜಿಲ್ಲೆಗೆ ಬಂದಿದ್ದು, ಇವರಿಗೂ ವೈರಸ್ ಅಟ್ಯಾಕ್ ಮಾಡಿದೆಯಾ ಎಂಬ ಭಯ ಉಂಟಾಗಿದೆ.

ಸದ್ಯ ಬ್ರಿಟನ್‌ನಿಂದ ಜಿಲ್ಲೆಗೆ ಬಂದಿರುವ 8 ಮಂದಿಯನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಇವರಲ್ಲಿ ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಇದ್ದಾರೆ ಎಂದು ತಿಳಿದುಬಂದಿದೆ.

ಎಲ್ಲರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯರು ಅದರ ವರದಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ‌. ಬ್ರಿಟನ್‌ ವೈರಸ್ ಅತೀ ವೇಗವಾಗಿ ಇತರರಿಗೆ ಹರಡಬಲ್ಲದ್ದಾಗಿದ್ದು, ಇದರಿಂದ ಜಿಲ್ಲೆಯ ಜನರಲ್ಲಿ ಭೀತಿ ಶುರುವಾಗಿದೆ.