ಮೋದಿ ಸರ್ಕಾರದ ದುರ್ಬಲ ನೀತಿಗಳಿಂದ ಆರ್ಥಿಕ ಹಿಂಜರಿತ: ರಾಹುಲ್ ಗಾಂಧಿ ಟೀಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರ್ಬಲ ಆರ್ಥಿಕ ನೀತಿಗಳಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತವು ದೊಡ್ಡಮಟ್ಟದ ಆರ್ಥಿಕ ಹಿಂಜರಿತವನ್ನು ಎದುರಿಸುವಂತಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಮೋದಿ ಅವರ ಕಾರ್ಯಕ್ರಮಗಳು ಭಾರತದ ಸದೃಢ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿವೆ. ಇದರಿಂದ ಜುಲೈ– ಸೆಪ್ಟೆಂಬರ್‌ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ  8.6ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದಿರುವ ಆರ್‌ಬಿಐ ವರದಿಯನ್ನುಅವರು ಪ್ರಸ್ತಾಪಿಸಿದ್ದಾರೆ.