“ಡ್ರೀಮ್ ಆಫ್ ಗೋವಾ” ಕನ್ನಡ ಆಲ್ಬಮ್ ಸಾಂಗ್ ಶೀಘ್ರದಲ್ಲೇ ಬಿಡುಗಡೆ

ಯುವ ಪ್ರತಿಭೆಗಳು ಎಲ್ಲಾ ಸೇರಿಕೊಂಡು ಕೆಸಿ ಕ್ರಿಯೇಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ಕನ್ನಡ ಕಾಮಿಡಿ ಆಲ್ಬಮ್ ಸಾಂಗ್ “ಡ್ರೀಮ್ ಆಫ್ ಗೋವಾ” ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಗೋವಾದಲ್ಲಿ ಈ ಆಲ್ಬಮ್ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ಕೆಸಿ ಕ್ರಿಯೇಷನ್ ಅರ್ಪಿಸುವ ಆಲ್ಬಮ್ ಸಾಂಗ್ ಅನ್ನು ಕೆ ಸಿ ಕ್ರಿಯೇಷನ್ ಕಥೆ ಹಾಗೂ ನಿರ್ಮಾಣ ಮಾಡಿರುತ್ತಾರೆ. ವಿಡಿಯೋಗ್ರಫಿ ಎಡಿಟಿಂಗ್ ಮತ್ತು ಡೈರೆಕ್ಷನ್ ಅನ್ನು ಅನಿಶ್ ಕಿನ್ನಿಗೋಳಿಯವರು ಮಾಡಿದ್ದು , ಸಂಗೀತ ನಿರ್ದೇಶನವನ್ನೂ ಅಭಿಜಿತ್ ಅಳದಂಗಡಿ ಮತ್ತು ಹಾಡಿದವರು ಸರಿಗಮಪ ಫೇಮ್ ಸಂತೋಷ್ ಬೆಂಗಳೂರು.

ಪೋಸ್ಟರ್ ಡಿಸೈನರ್ ಹರೀಶ್ ಉಪ್ಪಿನಂಗಡಿ ಕೊರಿಯೋಗ್ರಾಫರ್ ಮೋಹಿತ್ ಕುಲಾಲ್. ಡ್ರೋನ್ ಶೂಟ್ ಸವಿನ್ ಪೂಜಾರಿ. ಸುಮೇಧ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಬೆಂಗಳೂರು. ಮುಖ್ಯ ಪಾತ್ರಗಳಲ್ಲಿ ಹಿತೇಶ್ ಕಾಪಿನಡ್ಕ, ವಿನು ಚಾರ್ಮಾಡಿ ,ಲೋಕೇಶ್ ಮಾಣಿಲ , ಡಿಜೆ ಕಿಶೋರ್ , ಮನು ಸುಮನ್ ಅಭಿನಯಿಸುತ್ತಾರೆ. ನಾಯಕಿಯಾಗಿ ಸಲೋಮಿ ಡಿಸೋಜಾ ಮತ್ತು ಪುಣ್ಯಕೋಟಿ ಅಭಿನಯಿಸಿರುತ್ತಾರೆ.