ಡಾ.ರಾಜ್ ಕುಮಾರ್,ಪುಟ್ಟಣ್ಣ ಕಣಗಲ್ ಪ್ರಶಸ್ತಿ ಘೋಷಣೆ: ಉಮಾಶ್ರೀ ಸೇರಿ ಹಲವು ಕಲಾವಿದರಿಗೆ ಪ್ರಶಸ್ತಿ.

ಬೆಂಗಳೂರು: 2019ನೇ ಸಾಲಿನ ಡಾ.ರಾಜ್​ಕುಮಾರ್​, ಪುಟ್ಟಣ್ಣ ಕಣಗಲ್​ ಮತ್ತು ಡಾ.ವಿಷ್ಣುವರ್ಧನ್​ ಪ್ರಶಸ್ತಿ ಸೇರಿದಂತೆ ಚಲನಚಿತ್ರ ಸಾಹಿತ್ಯ ವಾರ್ಷಿಕ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಗುರುವಾರ (ಅ.30) ರಂದು ಘೋಷಿಸಿದೆ.ಈ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ನಟಿ ಉಮಾಶ್ರೀ ಅವರಿಗೆ ನೀಡಲಾಗಿದೆ. ಅಲ್ಲದೆ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಎನ್. ಆರ್. ನಂಜುಂಡೇಗೌಡ ಅವರಿಗೆ ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕರು ಹಾಗೂ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಅವರು ಭಾಜನರಾಗಿದ್ದಾರೆ.
ಈ ಮೂರು ಪ್ರಶಸ್ತಿಗಳಿ ತಲಾ 50 ರೂ, ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ಪದಕ ದೊರೆಯಲಿದೆ.ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ
ಲೇಖಕ ರಘುನಾಥ ಚ.ಹ. ಬರೆದ ಬೆಳ್ಳಿತೊರೆ ಸಿನಿಮಾ ಪ್ರಬಂಧಗಳ ಪುಸ್ತಕಕ್ಕೆ ಈ ಬಾರಿಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಬಂದಿದೆ. ಅಲ್ಲದೆ, ಈ ಪುಸ್ತಕವನ್ನು ಪ್ರಕಟಿಸಿದ ಪ್ರಕಾಶ ಕಂಬತ್ತಳ್ಳಿ ಅವರಿಗೆ ಕೂಡ ಪ್ರಶಸ್ತಿ ಲಭಿಸಿದೆ.

ಈ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ 20 ಸಾವಿರ ನಗದು ಮತ್ತು 50 ಗ್ರಾಂ ಬೆಳ್ಳಿ ದೊರಯಲಿದೆ.

ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ:
2019ನೇಯ ಗುಳೆ ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಈ ಚಿತ್ರವನ್ನು ಶ್ರೀನಾಥ್ ಎಸ್. ಹಡಗಲಿ ನಿರ್ದೇಶನ ಮಾಡಿದ್ದು, : ಐಯರ್ ಟಾಕೀಸ್ ಸಂಸ್ಥೆಯ ಮನೋಹರ್ ಎಸ್.ಐಯರ್ ನಿರ್ದೇಶಿಸಿದ್ದಾರೆ.

ಈ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ರೂ.25,000 ನಗದು ಹಾಗೂ 50 ಗ್ರಾಂ ಬೆಳ್ಳಿ ಲಭಿಸಲಿದೆ.