ಪರಿಸರ ದಿನಾಚರಣೆ: ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆ

ಉಡುಪಿ: ಶನಿವಾರ ಇನಾಯತ್ ಆರ್ಟ್ ಗ್ಯಾಲರಿ, ಜಯಂಟ್ಸ್ ಗ್ರೂಪ್ ಮತ್ತು ಮಣ್ಣು ಉಳಿಸಿ ಅಭಿಯಾನ ತಂಡ ಇವರ ಜಂಟಿ ಆಶ್ರಯದಲ್ಲಿ, ಪರಿಸರ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ನಾಲ್ಕು ವಿಭಾಗದಲ್ಲಿ ‘ಮಣ್ಣು ಉಳಿಸಿ’ ಇದರ ಕುರಿತು ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆ ಕುಂಜಿಬೆಟ್ಟಿನ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.

ಶಾಸಕ ರಘುಪತಿ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ಮಣ್ಣು ಉಳಿಸಿ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಎಂದರು. ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸ್ಪರ್ಧೆ ಏರ್ಪಪಡಿಸಿದ ಸಂಸ್ಥೆಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಆರ್ಟ್ಸ್ ಗ್ಯಾಲರಿಯ ಸ್ಥಾಪಕ ಲಿಯಾಕತ್ ಅಲಿ, ಜಯಂಟ್ಸ್ ಗ್ರೂಪ್ ಅಧ್ಯಕ್ಷ ಇಕ್ಬಾಲ್ ಮನ್ನಾ, ಕೇಂದ್ರ ಸಮಿತಿಯ ಸದಸ್ಯ ದಿನಕರ ಅಮೀನ್, ನಗರ ಸಭಾ ಸದಸ್ಯ ಗಿರೀಶ ಅಂಚನ್, ಪ್ರವೀಣ್ ಕುರ್ಮಾನಂತ , ಶಶಿಧರ್ ಶೆಟ್ಟಿ, ತೇಜಸ್ವರ್ ರಾವ್, ಅನಂತ ಶೇಟ್, ಕರಾಮತ್ ಅಲಿ, ರೋಶನ್ ಬಲ್ಲಾಳ್, ವಿವೇಕ್ ಕಾಮತ್ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಘವೇಂದ್ರ ಪ್ರಭು ಕರ್ವಾಲ್ ನಿರೂಪಿಸಿದರು, ಗಣೇಶ ಉರಾಲ್ ವಂದಿಸಿದರು. ವಿದ್ಯಾರ್ಥಿಗಳಿಗೆ ಮಣ್ಣು ಉಳಿಸುವ ಕುರಿತು ಸಾಕ್ಷ ಚಿತ್ರ ಪ್ರದರ್ಶಿಸಲಾಯಿತು.