ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಂಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಇದರ ಮಣಿಪಾಲ ವಲಯ ವ್ಯಾಪ್ತಿಯ ಪರ್ಕಳ CSC ಸೇವಾ ಕೇಂದ್ರದಲ್ಲಿ ಉಡುಪಿ ತಾಲೂಕಿನ ಪ್ರಥಮ ‘ಡಿಜಿ ಪೇ ಲೈಟ್’ ವ್ಯವಸ್ಥೆಯನ್ನು ತಾಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷರು ಸತ್ಯಾನಂದ ನಾಯಕ್ ಆತ್ರಾಡಿ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ಮಾಡಿ, ಮಹಾ ಗಣಪತಿ ಸಂಘದ ಶ್ರೀಮತಿ ಆರತಿ ಪಾಟೀಲ್ ಅವರಿಗೆ 4700-00 ರೂಪಾಯಿ ಯನ್ನು ATM ನಲ್ಲಿ ಕೊಡಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಡಿಜಿಟಲ್ ಪೇ ಸಿಸ್ಟಮ್ ನಲ್ಲಿ ಆಧಾರ್ ಕಾರ್ಡ್, ಫೋನ್ ನಂ., ಬೆರಳಚ್ಚು ಮುಖೆನ ಯಾವದೇ ಬ್ಯಾಂಕ್ ನ ಖಾತೆಯ ರೂಪಾಯಿ 10000-00 ವರೆಗೆ ಮೊತ್ತವನ್ನು ಪಡೆಯಬಹುದಾಗಿದೆ. ಇದಕ್ಕೆ ಯಾವದೇ ಶುಲ್ಕ ವನ್ನು ವಿಧಿಸಲಾಗುವುದಿಲ್ಲ.

ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಮಣಿಪಾಲ ವಲಯ ಮೇಲ್ವಿಚಾರಕರಾದ ಬಾಲಚಂದ್ರ, ಸಿ ಎಸ್ ಸಿ ಉಡುಪಿ ನೋಡೆಲ್ ಅಧಿಕಾರಿ ಯೋಗೀಶ್, ಸೇವಾ ಪ್ರತಿನಿಧಿ ಶ್ರೀಮತಿ ಶುಭವತಿ, CSC ಸೇವಾದಾರಿ ಪವಿತ್ರ, ಸುವಿಧಾ ಸಹಾಯಕರು, ಸಂಘದ ಸದಸ್ಯರು ಉಪಸ್ಥಿತರಿದ್ದರು.


















