ಅಂದರ್ ಬಾಹರ್ ಅಡ್ಡಕ್ಕೆ ಪೊಲೀಸರ ದಾಳಿ: ಐವರ ಬಂಧನ

ಬೈಂದೂರು: ಇಲ್ಲಿನ ಶಿರೂರು ಗ್ರಾಮದ ಕರಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿಯಲ್ಲಿ ತೊಡಗಿದ್ದ ಐದು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಾಸ್ತಿ ಸಂಕಯ್ಯ ಗೊಂಡ (55), ಮಹೇಶ ರಾಮ ನಾಯ್ಕ (32), ಮಂಜುನಾಥ ಗೊಂಡ (28), ಗಣೇಶ ರಾಘವೇಂದ್ರ ನಾಯ್ಕ (32) ಹಾಗೂ ರವಿ ಲಚ್ಮಯ್ಯು ನಾಯ್ಕ (38) ಎಂದು ಗುರುತಿಸಲಾಗಿದೆ. ಬಂಧಿತರಿಂದ ₹ 6900 ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.