ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ

ಕುಂದಾಪುರ: ಕುಂದಾಪುರ ಸಹಕಾರ ಭಾರತಿ ತಾಲೂಕು ಅಭ್ಯಾಸ ವರ್ಗ ಸಿದ್ದಾಪುರ ರೋಟರಿ ಭವನದಲ್ಲಿ ನಡೆಯಿತು.

ಅಭ್ಯಾಸ ವರ್ಗವನ್ನು ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ ಕಡ್ತಲ ಉದ್ಘಾಟಿಸಿದರು‌. ಬಳಿಕ ಮಾತನಾಡಿ, ಸಹಕಾರ ಭಾರತಿಯೂ ಸಹಕಾರಿ ಕ್ಷೇತ್ರದ ಮೇಲು ಸ್ಥರದ ಸಂಘಟನೆ ಮತ್ತು ದೇಶದ ಏಕೈಕ ಸರಕಾರೇತರ ಸಂಘಟನೆಯಾಗಿದೆ. ಸಹಕಾರ ಭಾರತಿ ಅಭ್ಯಾಸ ವರ್ಗ ದ ಮೂಲಕ ಸಮಾನ ಮನಸ್ಕ ಸಹಕಾರಿ ಗಳನ್ನು ಸಂಘಟನೆ ಯಾಗಿ ಒಗ್ಗೂಡಿಸಿ ಸಹಕಾರಿ ಕ್ಷೇತ್ರ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಎದುರಿಸುವ ಸವಾಲುಗಳಿಗೆ ಸಹಕಾರ ಭಾರತಿ ಸಹಕಾರಿಗಳನ್ನು ಪ್ರೇರಣದಾಯಕವಾಗಲು ಸಹಕಾರಿಯಾಗಿದೆ ಎಂದರು.

ಸಹಕಾರ ಭಾರತಿ ಕಾರ್ಯಕರ್ತರು ತಮ್ಮ ಸಮಸ್ಯೆ ಗಳನ್ನು ಬೇಡಿಕೆ ಗಳನ್ನು ಈಡೇರಿಸಿ ಕೊಳ್ಳುವ ಸಾಧನ ವನ್ನಾಗಿ ಸಹಕಾರ ಭಾರತಿ ಕಾರ್ಯಕರ್ತರು ರೂಢಿಸಿ ಕೊಂಡು ಸಹಕಾರ ಭಾರತಿಯ ಮೂಲಕ ಸಂಘಟನೆ ಯಾಗಿ ಒಗ್ಗೂಡಿ ನಮ್ಮೇಲ್ಲ ಸಮಸ್ಯೆ ಗಳನ್ನು ಉತ್ತರ ದಾಯಿ ವ್ಯವಸ್ಥೆ ಯಾಗಿ ಸಹಕಾರಿಯನ್ನು ರೂಡಿಸಿ ಕೊಳ್ಳಬೇಕೆಂದು ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ಹೇಳಿದರು.

ಗ್ರಾಮ ವಿಕಾಸದಲ್ಲಿ ಸಹಕಾರಿ ಪಾತ್ರ ದ ಅವಧಿಯನ್ನು ಪ್ರಮೋದ್ ಮಂದಾರ್ತಿ, ಸಹಕಾರಿ ಕಾನೂನು ಬಗ್ಗೆ ಮಂಜುನಾಥ್ ಎಸ್ ಕೆ, ಸಹಕಾರ ಭಾರತಿ ಪರಿಚಯದ ಅವಧಿ ಯನ್ನು ಮೋಹನ್ ಕುಂಬ್ಳೆಕರ ನಡೆಸಿದರು.

ಸಹಕಾರ ಭಾರತಿ ಕುಂದಾಪುರ ತಾಲೂಕು ಅಧ್ಯಕ್ಷ ಧಿನಪಾಲ ಶೆಟ್ಟಿ, ದ. ಕ. ಮಿಲ್ಕ್ ಯೂನಿಯನ್ ನಿರ್ದೇಶಕ ಗೋಪಾಲ ಕೃಷ್ಣ ಕಾಮತ್, ಉಳ್ಳೂರ ಮಚ್ಚಟ್ಟು ವಿ ಎಸ್ ಎಸ್ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಸಹಕಾರ ಭಾರತಿ ರಾಜ್ಯ ಮಹಿಳಾ ಸಂಘಟನಾ ಪ್ರಮುಖ ಸುಮನಾ ಶರಣ್, ಸಹಕಾರ ಭಾರತಿ ತಾಲೂಕು ಕಾರ್ಯದರ್ಶಿ ಮಹೇಶ್ ರಾವ್, ಸಮಾರೋಪ ದಲ್ಲಿ ದ. ಕ. ಮಿಲ್ಕ್ ಯೂನಿಯನ್ ನಿರ್ದೇಶಕ ನರಸಿಂಹ ಕಾಮತ್, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಶಂಕರನಾರಾಯಣ ವಿ ಎಸ್ ಅಧ್ಯಕ್ಷ ಡಾ ಸಚ್ಚಿದಾನಂದ ವೈದ್ಯಾ, ವಾರಾಹಿ ಮಿಲ್ಕ್ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. ಅನಂತ್ ಮೂರ್ತಿ ಸ್ವಾಗತಿಸಿ, ಕೌಶಿಕ್ ಯಡಿಯಾಲ ವಂದಿಸಿ, ದಯಾನಂದ ರಾವ್ ನಿರೂಪಿಸಿದರು.