ಕಾರ್ಕಳ: ಜೋಡುರಸ್ತೆಯಲ್ಲಿ ಶುಭಾರಂಭಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ನಲ್ಲಿ ಲಕ್ಷ್ಮಿ ಪೂಜೆ

ಕಾರ್ಕಳ: ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್ ನ 2 ನೇ ಮಹಡಿಯಲ್ಲಿ ಅತಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಪೂರ್ಣಿಮಾ ಲೈಫ್ ಸ್ಟೈಲ್ ನಲ್ಲಿ ಫೆ. 21ರಂದು ಲಕ್ಷ್ಮಿ ಪೂಜೆ ನಡೆಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮಾಲ್ ಗೆ ಭೇಟಿ ನೀಡಿ ಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡರು. ಮಾ.10 ರಂದು ಪೂರ್ಣಿಮಾ ಲೈಫ್ ಸ್ಟೈಲ್ ಶುಭಾರಂಭ: ವಿದ್ಯುಕ್ತವಾಗಿ ಮಾ.10 ರಂದು ಪ್ರೈಮ್ ಮಾಲ್ ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್ ಶುಭಾರಂಭಗೊಳ್ಳಲಿದೆ. ಶುಭಾರಂಭಕ್ಕೆ ಸಚಿವ ವಿ.ಸುನಿಲ್ […]

ಕಾಪು: ದಿ.ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ಸ್ಮರಣಾರ್ಥ ‘ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ’

ಕಾಪು: ಗುರ್ಮೆ ಫೌಂಡೇಶನ್ ವತಿಯಿಂದ ದಿ.ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ಸ್ಮರಣಾರ್ಥ ಕಾಪುವಿನ ಕಳತ್ತೂರಿನ ಗುರ್ಮೆಯಲ್ಲಿ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆಗೊಂಡಿತು. ಇದೇ ಸಂದರ್ಭದಲ್ಲಿ ಕೀರ್ತನ, ಸಾಂತ್ವನ, ಯಕ್ಷಗಾನ ಕಾರ್ಯಕ್ರಮ ವೈಭವದಿಂದ ನಡೆಯಿತು. ಕಾರ್ಯಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಮಾತೃ ಸೇವೆ, ಗೋ ಸೇವೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮಾತೃ ಸೇವೆ ಹಾಗೂ ಗೋ ಸೇವೆಯಿಂದ ಏಳಿಗೆ ಸಾಧ್ಯ ಎಂದರು. ಗ್ರಾಮೀಣಾಭಿವೃದ್ಧಿ ಸಚಿವ […]

ನ್ಯಾಯಾಂಗ ವ್ಯವಸ್ಥೆಯ ಕೆಲ ಲೋಪ ದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಮತ

ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿ‌ ಇರುವ ಕೆಲವೊಂದು ಮೂಲಭೂತ ಲೋಪದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ. ಉಡುಪಿ ನ್ಯಾಯಾಲಯದ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯದ ಕಟ್ಟಡದ ಮೂರನೇ ಮಹಡಿ, ನೂತನ ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿ.ಸಿ. ಕ್ಯಾಬಿನ್ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೋರ್ಟ್ ಗಳಲ್ಲಿರುವ ಕೇಸ್ […]

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್ ಶೋರೂಮ್‌ನ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ

ಉಡುಪಿ: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್ ಶೋರೂಮ್‌ನಲ್ಲಿ ನಡೆಯುವ ಡೈಮಂಡ್ ಪ್ರಿವೀವ್ ಉತ್ಸವವನ್ನು ಭಾನುವಾರ ಉದ್ಘಾಟಿಸಲಾಯಿತು. ಫೆ.18ರವರೆಗೆ ಹಮ್ಮಿಕೊಂಡಿರುವ ಈ ಉತ್ಸವವನ್ನು ಪೆನಿನ್ಸುಲಾ ಗ್ರಾಂಡ್ ಹೊಟೇಲ್‌ನ ಆಡಳಿತ ನಿರ್ದೇಶಕ ಹಾಗೂ ಚೇರ್ಮನ್ ಕರುಣಾಕರ್‌ ಆರ್‌. ಶೆಟ್ಟಿ ಉದ್ಘಾಟಿಸಿದರು. ಡೈಮಂಡ್ ಆಭರಣಗಳಾದ ತುರ್ಕಿಸ್ ಸಂಗ್ರಹವನ್ನು ವೈದ್ಯ ಡಾ. ಅನಂತ್ ಎಸ್. ಶೆಣೈ, ಮಿಡ್ಲ್ ಈಸ್ಟ್ ಸಂಗ್ರಹವನ್ನು ಉದ್ಯಮಿ ಎ.ಆರ್.ಬ್ಯಾರಿ, ಸೋಲಿಟೈರ್ ಸಂಗ್ರಹವನ್ನು ಸೂರಿ ಸೀಫುಡ್‌ನ ಅಬ್ದುಲ್ ರಹಿಮಾನ್, ಬೆಲ್ಜಿಯಂ ಸಂಗ್ರಹವನ್ನು […]

ಉಡುಪಿ: ಎಸ್.ಎಫ್. ಬ್ಯಾಟರಿಸ್ ಪವರ್‌ ಬೇ ಶೋರೂಮ್ ಉದ್ಘಾಟನೆ

ಉಡುಪಿ: ಉಡುಪಿ ಕಲ್ಸಂಕ ರಸ್ತೆಯ ಸಿಟಿ ಬಸ್ ನಿಲ್ದಾಣದ ಸಮೀಪ‌ದ ಸಬ್ಸನ್ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ನೂತನ ಎಸ್.ಎಫ್. ಬ್ಯಾಟರಿಸ್ ಪವರ್‌ ಬೇ ಶೋರೂಮ್ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕ್ ಬ್ರಹ್ಮಗಿರಿ‌ ಶಾಖೆಯ ವ್ಯವಸ್ಥಾಪಕಿ ಎನ್. ಅರ್ಚನಾ ಅವರು ನೂತನ ಶೋರೂಮ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಂತೋಷ್ ಪವಾರ್, ಹಿರಿಯ ಪ್ರಾಂತ ಕಾರ್ಯನಿರ್ವಾಹಕ ಪ್ರತಾಪ್ ಎ.ಎನ್, ಸೇವಾ ಇಂಜಿನಿಯರ್ ಗಜಾನನ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೋರೂಮ್ ಮಾಲೀಕ ಪ್ರಶಾಂತ್ ರಾವ್ ಹಾಗೂ ಸಂಧ್ಯಾ […]