ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉಡುಪಿಯ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಇಂದು ನಡೆಯಿತು. ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಅವರಿಗೆ ಹಸ್ತಾಂತರಿಸಿದರು ಸಮಾರಂಭದಲ್ಲಿ ಮನೋವೈದ್ಯ ಡಾ. ಪಿ ವಿ ಭಂಡಾರಿ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ವಿವಿಧತೆಯ ಭಾಷೆಯಾಗಿದೆ. ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ […]

ಕಾರ್ಕಳ: ಜೋಡುರಸ್ತೆ ಪ್ರೈಮ್ ಮಾಲ್ ನಲ್ಲಿ ನೂತನ “ಪೂರ್ಣಿಮಾ ಲೈಫ್ ಸ್ಟೈಲ್‌” ಮಳಿಗೆ ಶುಭಾರಂಭ

ಕಾರ್ಕಳ: ಇಲ್ಲಿನ ಜೋಡುರಸ್ತೆಯ ಪ್ರೈಮ್ ಮಾಲ್ ನಲ್ಲಿ ಪೂರ್ಣಿಮಾ ಲೈಫ್ ಸ್ಟೈಲ್‌ ಮಳಿಗೆ ಗುರುವಾರ ಉದ್ಘಾಟನೆಗೊಂಡಿದೆ. ಮಳಿಗೆಯನ್ನು ಉದ್ಘಾಟಿಸಿ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಪೂರ್ಣಿಮಾ ಸಮೂಹ ಸಂಸ್ಥೆಗೆ 72 ವರ್ಷಗಳ ಇತಿಹಾಸವಿದೆ. ಗ್ರಾಹಕರಿಗೆ ನೀಡಿದ ಸೇವೆಯ ಸತ್ಕಾರ್ಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಆ ಮೂಲಕ ಐದನೇ ಶಾಖೆ ಲೋಕಾರ್ಪಣೆಗೊಂಡಿದೆ. ಅಮೃತ ಮಹೋತ್ಸವ ಆಚರಿಸುವ ಸಂದರ್ಭ ಕಾರ್ಕಳದ ಜತೆಗೆ ಸುತ್ತಮುತ್ತಲ ಊರುಗಳಲ್ಲೂ ಈ ಸಂಸ್ಥೆಯ ವಿಸ್ತೃತ ಶಾಖೆಗಳು ತೆರೆದುಕೊಳ್ಳಲಿದೆ. ಸಂಸ್ಥೆಯ ಸಂಸ್ಥಾಪಕರಾದ ಪಾಂಡುರಂಗ ಪ್ರಭು […]

ಬ್ರಹ್ಮಾವರ: ಮಾ.10ರಿಂದ 27ರ ವರೆಗೆ ಜನನಿ‌ ಎಂಟರ್ ಪ್ರೈಸಸ್ ನಲ್ಲಿ “ಜನನಿ‌ ಇಎಂಐ ಉತ್ಸವ”

ಬ್ರಹ್ಮಾವರ: ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಮಾರ್ಚ್ 10 ರಿಂದ 27ರವರೆಗೆ ಜನನಿ ಇಎಂಐ ಉತ್ಸವ ನಡೆಯಲಿದ್ದು, ಈ ಪ್ರಯುಕ್ತ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಒಂದು ದೊಡ್ಡ ಅವಕಾಶವನ್ನು ಕಲ್ಪಿಸಿದೆ. ಬಡ್ಡಿ ರಹಿತ, ಶುಲ್ಕ ರಹಿತ EMI  ಆಫರ್: ಜನನಿಯಲ್ಲಿ ಎಲ್ಲಾ ವರ್ಗದ ಪೀಠೋಪಕರಣಗಳಗೆ ಇಎಂಐ ಆಫರ್ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್, ಎಸಿ, ರೆಫ್ರಿಜರ್, ವಾಷಿಂಗ್ ಮೆಷಿನ್, ಟಿವಿ, ಹೋಮ್ ಥಿಯೇಟರ್, ಮೈಕ್ರೋ ಓವನ್‌ಗಳು, ಕೂಲರ್‌ಗಳು ವಾಟರ್ ಪ್ಯೂರಿಫೈಯರ್ ಮತ್ತು ವಾಟರ್ ಹೀಟರ್, ಇನ್ವರ್ಟರ್, […]

ಪವರ್ ಸಂಸ್ಥೆ ಆಶ್ರಯದಲ್ಲಿ ‘ಚಾರ್ಟರ್ ಡೇ’ ಹಾಗೂ ‘ಮಹಿಳಾ ದಿನಾಚರಣೆ’

ಉಡುಪಿ: ಪವರ್ ಫ್ಲಾಟ್‌ ಫಾರಂ ಆಫ್ ವುಮೆನ್ ಎಂಟರ್‌ಫ್ರಿನಿಯರ್ಸ್(ರಿ) ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚಾರ್ಟರ್‌ ಡೇ ಯು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಭಾಷಾ ನಟಿ ವಿನಯ ಪ್ರಸಾದ್ ಅವರು ನೆರವೇರಿಸಿದರು. ಪವರ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ., ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್, ಉಪಾಧ್ಯಕ್ಷರಾಗಿ ಸುವರ್ಶಾ ಮಿನ್ಜ್ ಹಾಗೂ ಶಾಲಿನಿ ಬಂಗೇರ ಪದಗ್ರಹಣ ಸ್ವೀಕರಿಸಿದರು. […]

ಉಡುಪಿ: ಗ್ಯಾರೇಜ್ ಮಾಲೀಕರ ಸಂಘ; ಪಿಂಚಣಿ ನೋಂದಣಿ ಶಿಬಿರ ಉದ್ಘಾಟನೆ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಸಂಘ ಉಡುಪಿ ವಲಯ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಪಿಂಚಣಿ ಸಪ್ತಾಹ ಆಚರಣೆ ಮತ್ತು ಪ್ರಧಾನ ಮಂತ್ರಿ ಪಿಂಚಣಿ ನೋಂದಣಿ ಶಿಬಿರ ಬುಧವಾರ ಉದ್ಯಾವರದ ಸಂಘದ ಕಚೇರಿಯಲ್ಲಿ ಆಯೋಜಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ, ಗೌರವ ಸಲಹೆಗಾರ ಯಾದವ್ ಶೆಟ್ಟಿಗಾರ್, ವಿಲ್ಸನ್ ಅಂಚನ್, ಉಪಾಧ್ಯಕ್ಷ ರಾಜೇಶ್ […]