ಕಾರ್ಕಳ ಉತ್ಸವ: ಅರಣ್ಯ ಪ್ರಾತ್ಯಕ್ಷಿಕೆ ಹಾಗೂ ವಸ್ತು ಪ್ರದರ್ಶನ ಮಳಿಗೆ ಹಾಗೂ ಮಾರಾಟ ಮಳಿಗೆ ಉದ್ಘಾಟನೆ

ಕಾರ್ಕಳ: ಕರ್ನಾಟಕ ಏಕೀಕರಣದ ಹೊರಾಟದಲ್ಲಿ ಕಾರ್ಕಳದ ಜಿನರಾಜ ಹೆಗ್ಡೆಯವರು ಪ್ರಮುಖ ಪಾತ್ರ ವಹಿಸಿದರು. ಅವರ ಸ್ಮರಣಿಯೊಂದಿಗೆ ಹೊಸ ಪೀಳಿಗೆಗೆ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದೊಂದಿಗೆ ಅವರ ಹೆಸರನ್ನು ಕಾರ್ಕಳ ಉತ್ಸವದ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯ ವೇದಿಕೆಗೆ ಇಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಕಾರ್ಕಳ ಉತ್ಸವ ಪ್ರಯುಕ್ತ ಅರಣ್ಯ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನ ಮಳಿಗೆ ಹಾಗೂ ಮಾರಾಟ ಮಳಿಗೆ ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ […]
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಉದ್ಘಾಟನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗವನ್ನು ಉದ್ಘಾಟಿಸಲಾಯಿತು. ಡಾ ವಿವೇಕ್ ಮಂಗ್ಲಾ, ನಿರ್ದೇಶಕರು – ಜಠರ ಕರುಳು ಮತ್ತು ಹೆಪಟೊಪ್ಯಾಂಕ್ರಿಯಾಟೋಬಿಲಿಯರಿ, ಸರ್ಜಿಕಲ್ ಆಂಕೊಲಾಜಿ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನವದೆಹಲಿ ಅವರು ಉದ್ಘಾಟಿಸಿದರು. ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಉಪಕುಲಪತಿ, ಮಾಹೆ, ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಎಲ್.ಎನ್.ಜಿ.ರಾವ್, ಸಹ ಉಪಕುಲಪತಿ (ವೈದ್ಯಕೀಯ ಮತ್ತು ದಂತ ವಿಜ್ಞಾನ), ಮಾಹೆ ಮಣಿಪಾಲ, ಡಾ. ನಾಗರಾಜ್ ಪಾಲಂಕರ್ ಮುಖ್ಯ ಸಲಹೆಗಾರರು […]
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್; ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟನೆ

ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ನವೋದಯ ಸ್ವಸಹಾಯ ಸಂಘ ಹಾಗೂ ಉಡುಪಿ ಗಿರಿಜಾ ಗ್ರೂಫ್ ಆಫ್ ಕಾನ್ಸರ್ನ್ಸ್ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ನಗರದ ಪೈ ಸೇಲ್ಸ್ ಹಿಂಬದಿಯ ಮೆಡಿಕಲ್ ಸೆಂಟರ್ ನಲ್ಲಿ ನಡೆಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ. ಜಗದೀಶ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರಂಜಿತಾ ಎಸ್. ನಾಯಕ್ ಅವರು, ಸ್ತ್ರಿ ರೋಗಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂರು ಫ್ಯಾಮಿಲಿ […]
ಮಾ.14ರಿಂದ 20ರ ವರೆಗೆ “ಹರ್ಷೋತ್ಸವ” ಸಂಭ್ರಮಾಚರಣೆ

ಉಡುಪಿ: ಗ್ರಾಹಕರ ನೆಚ್ಚಿನ ಶಾಪಿಂಗ್ ಹಬ್ಬ “ಹರ್ಷೋತ್ಸವ” ಈ ಬಾರಿ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಮಾ.14 ರಿಂದ 20ರ ವರೆಗೆ ನಡೆಯಲಿದೆ. ಉಡುಪಿಯ 3, ಮಂಗಳೂರಿನ 2, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ, ಶಿವಮೊಗ್ಗ ಮಳಿಗೆಗಳಲ್ಲಿ ಗ್ರಾಹಕರ ಶಾಪಿಂಗ್ ಹಬ್ಬ ಹರ್ಷೋತ್ಸವ ಸಂಭ್ರಮದಿಂದ ಜರುಗಲಿದೆ. ಜಗತ್ಪ್ರಸಿದ್ಧ ಬ್ರ್ಯಾಂಡ್ ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್ ಬಿ , ವಲ್ಸಪೂಲ್ , ಸೋನಿ, ಪ್ಯಾನಸೋನಿಕ್, ಎಲ್ ಜಿ, ಸ್ಯಾಮ್ ಸಂಗ್, ಬೋಶ್, ಹೈಯರ್, ಲೀಭೇರ್, ಬ್ಲೂ ಸ್ಟಾರ್, ಆಪಲ್, ಎಚ್ […]
ಕಾರ್ಕಳ ಉತ್ಸವ: ಗಾಂಧಿ ಮೈದಾನದಲ್ಲಿ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಅಭಿವೃದ್ದಿ ದೃಷ್ಠಿಯಲ್ಲಿ ಅನೇಕ ಕಲ್ಪನೆ ಇರಿಸಿಕೊಂಡಿರುವ ಸಚಿವರು ಕಾರ್ಕಳಕ್ಕೆ ಅನುದಾನ ತರಿಸಿಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ ಇದಕ್ಕೆ ಇಚ್ಚಾಶಕ್ತಿ ಬೇಕು ಹೊರತು ಅಪನಂಬಿಕೆಯಲ್ಲ. ಅಭಿವೃದ್ಧಿ ದೃಷ್ಟಿಯಲ್ಲಿ ರಾಜಕೀಯವಿಲ್ಲ, ಗ್ರಾಮೀಣ ಭಾಗಗಳ ಸಂಸ್ಕೃತಿಯನ್ನು ಚಿಗುರಿಸುವಂತಾಗಬೇಕು ದಾಖಲೀಕರಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದರು. ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ ಸಾಧನೆಗಳು ನಿಂತ ನೀರಾಗಬಾರದು ಅದನ್ನು ಮೀಳಿಗೆಯಿಂದ […]