ಹಿರಿಯಡಕ ನವ್ಯೋದಯ ಫ್ರೆಂಡ್ಸ್ ಕ್ಲಬ್ ನ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಹಿರಿಯಡಕ: ಎರಡು ವರುಷಗಳ ಹಿಂದೆ ಮರಳು ಶೇಖರಣೆಯಿಂದ ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದ್ದ ಹಿರಿಯಡ್ಕದ ಗಾಂಧಿ ಮೈದಾನದಲ್ಲಿ ಹಲವು ವರುಷಗಳ ನಂತರ ಪುನಃ ಕ್ರೀಡೆಗಳೆಗೆ ಚಾಲನೆ ಸಿಕ್ಕಂತಾಗಿದೆ. ನವ್ಯೋದಯ ಫ್ರೆಂಡ್ಸ್ ಕ್ಲಬ್ ಹಿರಿಯಡಕ ಇವರ ಆಶ್ರಯದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಇವರುಗಳ ಸಹಕಾರದೊಂದಿಗೆ ಇಂದು ವಾಲಿಬಾಲ್ ಪಂದ್ಯಾಟದ ಉದ್ಘಾಟನೆಗೊಂಡಿತು. ಈ ಪಂದ್ಯಾಟವನ್ನು ದಿನೇಶ್ ಮೆಂಡನ್ – ಜಿಲ್ಲಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಇವರು ಉದ್ಘಾಟಿಸಿ ಶುಭ […]

ಕುಕ್ಕಿಕಟ್ಟೆ: ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಉಡುಪಿ: ಹಿಂದು ಜಾಗರಣಾ ವೇದಿಕೆ ಹಾಗೂ ಬೊಬ್ಬರ್ಯ ಫ್ರೇಂಡ್ಸ್ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ,ಗ್ರಾಮ ವಿಕಾಸ ಸಮಿತಿ ಹಾವಂಜೆ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಎ.10 ಆದಿತ್ಯವಾರ ವಿಶ್ವಕರ್ಮ ಸಭಾಭವನ‌ ಕುಕ್ಕಿಕಟ್ಟೆ ಸಭಾಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕುಕ್ಕೆಹಳ್ಳಿ ಗ್ರಾಮ ಪಂಚಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಿಂದು ಜಾರಗರಣಾ ವೇದಿಕೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹತ್ತು […]

ಬೈಕಾಡಿ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ: ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ- ಬೈಕಾಡಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮವು ಎ.8 ರಂದು ನಾದ ಮಣಿನಾಲ್ಕೂರು ಅವರ ಅರಿವಿನ ಹಾಡುಗಳೊಂದಿಗೆ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿಯವರು ನಾಟಕವೂ ಕೂಡ ಒಂದು ಮನೋಚಿಕಿತ್ಸೆಯೇ ಆಗಿದೆ ಮತ್ತು ಅದು ಶಿಸ್ತು ಹಾಗೂ ಬದ್ಧತೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ […]

ಮಣಿಪಾಲ: ಎಂಐಸಿಯ 19ನೇ ಆವೃತ್ತಿಯ ‘ನಮ್ಮ ಅಂಗಡಿ’ ಉದ್ಘಾಟನೆ

ಮಣಿಪಾಲ: ಮಣಿಪಾಲ್  ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್‌ನ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ ನಮ್ಮ ಅಂಗಡಿಯ ಉದ್ಘಾಟನೆ ಮಾರ್ಚ್ 8 ರಂದು ಎಂಐಸಿ ಕ್ಯಾಂಪಸ್‌ನಲ್ಲಿ  ನಡೆಯಿತು. ಸಮಾರಂಭವನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಕೂರ್ಮಾರಾವ್ ಎಂ, ಐಎಎಸ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೂರ್ಮಾ ರಾವ್, ಕಳೆದ 19 ವರ್ಷಗಳಿಂದ ಇಂತಹ ಉದಾತ್ತ ಉದ್ದೇಶವನ್ನು ಕೈಗೊಂಡಿರುವ ಸಂಸ್ಥೆ ಮತ್ತು ನಮ್ಮ ಭೂಮಿಯೊಂದಿಗೆ  ಅವರ ಒಡನಾಟವನ್ನು ಅಭಿನಂದಿಸಿದರು. ಅಂತಹ ಕಾರಣಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂವಹನ ವಿಭಾಗವು […]

ದೇವರ ದಾಸಿಮಯ್ಯ ಜಯಂತಿ ಆಚರಣೆ

ಉಡುಪಿ: ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಕಾಣಾ ರಾಮನಾಥ ಎಂಬ ಜೇಡರ ದಾಸಿಮಯ್ಯರ ವಚನದಂತೆ ಮಾನವನು ಅರಿಷಡ್ವರ್ಗಗಳ ಆಸೆಗೆ ಒಳಗಾದರೆ ಹೀನ ಸ್ಥಿತಿಗೆ ತಲುಪುತ್ತಾನೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇದರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ದೇವರ ದಾಸಿಮಯ್ಯ ಪ್ರಪ್ರಥಮ ವಚನಕಾರರಾಗಿದ್ದು, ವಿಶ್ವ ಸಾಹಿತ್ಯಕ್ಕೆ […]