ಬಿಲ್ಲವ ಸೇವಾ ಸಂಘ ಅಂಬಲಪಾಡಿ: ಉಚಿತ ಯೋಗ ಶಿಕ್ಷಣ ಶಿಬಿರ ಉದ್ಘಾಟನೆ

ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ, ನೇತ್ರಾವತಿ ವಲಯ ಉಡುಪಿ ಜಿಲ್ಲೆ ಇದರ ವತಿಯಿಂದ ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಆಶ್ರಯದಲ್ಲಿ ಆರೋಗ್ಯ ಸಂರಕ್ಷಣೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ರವರು ಯೋಗ ಶಿಕ್ಷಣ ತರಬೇತಿ ಶಿಬಿರವನ್ನು ಜ್ಯೋತಿ […]
ಅಂಬೇಡ್ಕರ್ ಜಯಂತಿ: ಸ್ವಚ್ಛ ಭಾರತ್ ಮಿಷನ್ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ನಗರಸಭಾ ‘ಸ್ವಚ್ಛತಾ ಸೈನಿಕರಿಗೆ ಸನ್ಮಾನ’ ಕಾರ್ಯಕ್ರಮ

ಉಡುಪಿ: ಬಿಜೆಪಿ ಉಡುಪಿ ಜಿಲ್ಲೆ, ಜಿಲ್ಲಾ ಪ್ರಬುದ್ಧರ ಪ್ರಕೋಷ್ಠ ಮತ್ತು ಜಿಲ್ಲಾ ಮೀನುಗಾರರ ಪ್ರಕೋಷ್ಠ ಇದರ ಜಂಟಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ನಗರಸಭಾ ‘ಸ್ವಚ್ಛತಾ ಸೈನಿಕರಿಗೆ ಸನ್ಮಾನ’ ಕಾರ್ಯಕ್ರಮವು ಉಡುಪಿ ನಗರಸಭೆಯ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಂಬೇಡ್ಕರ್ ರವರ ತತ್ವಾದರ್ಶಗಳು ಎಂದೆಂದಿಗೂ ಅತ್ಯಂತ ಪ್ರಸ್ತುತ. ಸಾಮಾಜಿಕ ಪ್ರಜಾಪ್ರಭುತ್ವ ಉಳಿದರೆ ಮಾತ್ರ […]
ಆಚಾರ್ಯಾಸ್ ಏಸ್: ಹತ್ತನೇ ತರಗತಿ ವಕೇಷನ ಬ್ಯಾಚ್ ಶುಭಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಜಾ ದಿನದ ಶೈಕ್ಷಣಿಕ ತರಬೇತಿಯು ಶುಭಾರಂಭಗೊಂಡಿತು. ಒಂಬತ್ತನೇ ತರಗತಿ ಪೂರೈಸಿ ಹತ್ತನೇ ತರಗತಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಹಾಗೂ ಮ್ಯಾತ್ಸ್ ವಿಷಯವಾಗಿ ನಿರಂತರ ಒಂದು ವರ್ಷಗಳ ಕಾಲ ಜರಗಲಿರುವ ತರಬೇತಿಯನ್ನು ದೀಪ ಬೆಳಗಿಸಿ ಏಸ್ ಸಂಸ್ಥೆಯ ಪ್ರಾಂಗಣದಲ್ಲಿ ಶುಭಾರಂಭಗೊಳಿಸಲಾಯಿತು. ಸಂಸ್ಥೆಯ ಶ್ರೀ ಪ್ರಹ್ಲಾದ ಆಚಾರ್ಯರು ಶ್ರೀಮತಿ ಗೀತಾ ಆಚಾರ್ಯರು ಶ್ರೀ […]
ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆ

ಮಂಗಳೂರು: “ಯಕ್ಷಗಾನ ಕಲಾ ಶಿಕ್ಷಣವು ಮಕ್ಕಳ ಬಾಳಿನಲ್ಲಿ ಶಿಸ್ತು, ದೈಹಿಕ ಕ್ಷಮತೆ, ಮಾನಸಿಕ ದೃಢತೆ, ಸಾಂಸ್ಕೃತಿಕ ಸಂಸ್ಕಾರ, ಭಾಷೆ, ಭಾಷಾಶುದ್ಧಿ ಇತ್ಯಾದಿಗಳನ್ನು ತರುತ್ತದೆ. ಅವರ ಶೈಕ್ಷಣಿಕ ಪ್ರಗತಿಗೂ ಅದು ಪೂರಕ. ಕಲಿಯುವುದು, ಕಲಿಸುವುದು ಸುಲಭ. ಆದರೆ ತಿದ್ದುವುದು ಕಷ್ಟ. ಆದುದರಿಂದ ನಿಧಾನವಾದರೂ ಪರವಾಗಿಲ್ಲ, ತಪ್ಪಿಲ್ಲದೆ ಶುದ್ಧವಾಗಿ ಕಲಿಯುವುದು ಮುಖ್ಯ” ಎಂದು ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಕಲಾರಂಗ (ರಿ ).ಉಡುಪಿ ಇದರ ಕಾರ್ಯದರ್ಶಿ ಶ್ರೀ ಮುರಲಿ ಕಡೇಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಕಡೇಕಾರ್ ಅವರು ಯಕ್ಷಾಭಿನಯ ಬಳಗ, […]
ಹಿರಿಯಡಕ ನವ್ಯೋದಯ ಫ್ರೆಂಡ್ಸ್ ಕ್ಲಬ್ ನ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಹಿರಿಯಡಕ: ಎರಡು ವರುಷಗಳ ಹಿಂದೆ ಮರಳು ಶೇಖರಣೆಯಿಂದ ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದ್ದ ಹಿರಿಯಡ್ಕದ ಗಾಂಧಿ ಮೈದಾನದಲ್ಲಿ ಹಲವು ವರುಷಗಳ ನಂತರ ಪುನಃ ಕ್ರೀಡೆಗಳೆಗೆ ಚಾಲನೆ ಸಿಕ್ಕಂತಾಗಿದೆ. ನವ್ಯೋದಯ ಫ್ರೆಂಡ್ಸ್ ಕ್ಲಬ್ ಹಿರಿಯಡಕ ಇವರ ಆಶ್ರಯದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಇವರುಗಳ ಸಹಕಾರದೊಂದಿಗೆ ಇಂದು ವಾಲಿಬಾಲ್ ಪಂದ್ಯಾಟದ ಉದ್ಘಾಟನೆಗೊಂಡಿತು. ಈ ಪಂದ್ಯಾಟವನ್ನು ದಿನೇಶ್ ಮೆಂಡನ್ – ಜಿಲ್ಲಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಇವರು ಉದ್ಘಾಟಿಸಿ ಶುಭ […]