ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭ

ಕಿನ್ನಿಗೋಳಿ: ನಾವು ಹಿಂದೂಗಳಾಗಿ ಒಗ್ಗಟ್ಟಾದಾಗ ಮಾತ್ರ ಸಶಕ್ತ ಸಮಾಜದ ಏಳಿಗೆ ಸಾಧ್ಯ. ನಮ್ಮೊಳಗಿನ ಜಾತಿ – ಪಂಗಂಡಗಳು ಸಾಮೂಹಿಕ ಪ್ರಗತಿಗೆ ತೊಡಕಾಗಬಾರದು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು. ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾಶಂಸನೆ ನೀಡಿ ಮಾತನಾಡಿದರು. ಆನೆಗುಂದಿ ವೇದ ಪಾಠಶಾಲೆಯ ಪವನ್ ಶರ್ಮ್ ಅನುಗ್ರಹ […]

ಪರ್ಕಳ: ‘ಕ್ಷೇಮ ಪಾಲಿ ಕ್ಲಿನಿಕ್’ ಉದ್ಘಾಟನೆ

ಉಡುಪಿ: ಪರ್ಕಳದ ಗೋಪಾಲ್ ಟವರ್ಸ್ ನಲ್ಲಿ “ಕ್ಷೇಮ ಪಾಲಿ ಕ್ಲಿನಿಕ್” ಉದ್ಘಾಟನೆಗೊಂಡಿತು. ಯೋಗ ಗುರು ಗಣಪತಿ ಜೋಯಿಷ್ ಕ್ಲಿನಿಕ್ ಉದ್ಘಾಟಿಸಿ ಶುಭಹಾರೈಸಿದರು. ಕ್ಷೇಮ ಪಾಲಿ ಕ್ಲಿನಿಕ್ ಮಾಲೀಕ ರಾಧಾಕೃಷ್ಣ ಕೆ.ಜಿ. ಉಪಸ್ಥಿತರಿದ್ದರು. ಉದ್ಘಾಟನೆಯ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ದಿನೇಶ್ ಸಂತೆಕಟ್ಟೆ ಮತ್ತು ಬಳಗ ಇವರಿಂದ “ಸಂಗೀತ ರಸಮಂಜರಿ” ಕಾರ್ಯಕ್ರಮ ನಡೆಯಿತು. ಬಳಿಕ “ಕೃಷ್ಣಾರ್ಜುನ ಕಾಳಗ” ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಂಡಿತು. ಡಾ. […]

ಆಟೋ ರಿಕ್ಷಾ ಛಾವಣಿ ಮೇಲೆ ಚಲಿಸುವ ಉದ್ಯಾನ!! ದೆಹಲಿ ರಿಕ್ಷಾವಾಲನ ವಿನೂತನ ಪ್ರಯೋಗ!

ದೆಹಲಿ: ಭಾರತದ ರಾಜಧಾನಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮಹೇಂದ್ರ ಕುಮಾರ್ ಎಂಬುವರು ತಮ್ಮ ಪ್ರಯಾಣಿಕರನ್ನು ತಂಪಾಗಿರಿಸಲು ವಿಶಿಷ್ಟ ವಿಧಾನ ಒಂದನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಇವರ ಆಟೋದೊಳಗಡೆ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರ ತಲೆ ತಂಪಾಗಿರುತ್ತದೆ. ತಮ್ಮ ಆಟೋದ ಛಾವಣಿಯ ಮೇಲೆ ಹಚ್ಚ ಹಸಿರಿನ ಉದ್ಯಾನವೊಂದನ್ನು ಬೆಳೆಸಿರುವ ಕುಮಾರ್, ಬೇಸಿಗೆಯ ಬಿರು ಬಿಸಿಲಿನಲ್ಲೂ ಪ್ರಯಾಣಿಕರಿಗೆ ತಂಪನ್ನುಣಿಸುತ್ತಿದ್ದಾರೆ. 48 ವರ್ಷ ವಯಸ್ಸಿನ ಕುಮಾರ್ ಅವರ ಈ ‘ಚಲಿಸುವ ಉದ್ಯಾನ’ವು ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಇವರ ರಿಕ್ಷಾದಲ್ಲಿ […]

ಪರ್ಕಳ: ನಾಳೆ (ಮೇ 3) “ಕ್ಷೇಮ ಪಾಲಿ ಕ್ಲಿನಿಕ್” ಶುಭಾರಂಭ

ಉಡುಪಿ: ಪರ್ಕಳದ ಗೋಪಾಲ್ ಟವರ್ಸ್ ನಲ್ಲಿ ಇದೇ ಬರುವ ಮೇ 3ರಂದು “ಕ್ಷೇಮ ಪಾಲಿ ಕ್ಲಿನಿಕ್” ಶುಭಾರಂಭಗೊಳ್ಳಲಿದೆ. ಈ ಪ್ರಯುಕ್ತ ಅಂದು ಬೆಳಿಗ್ಗೆ 9.00 ರಿಂದ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 3.30ರಿಂದ 5.30ರ ವರೆಗೆ ದಿನೇಶ್ ಸಂತೆಕಟ್ಟೆ ಮತ್ತು ಬಳಗ ಇವರಿಂದ “ಸಂಗೀತ ರಸಮಂಜರಿ” ಸಂಜೆ 5.30 ರಿಂದ 8.00ರ ವರೆಗೆ ಯಕ್ಷಗಾನ ತಾಳಮದ್ದಲೆ “ಕೃಷ್ಣಾರ್ಜುನ ಕಾಳಗ” ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೀ ರಾಘವೇಂದ್ರ ಮಯ್ಯ […]

ವಿಶ್ವ ಯಕೃತ್ತಿನ ದಿನ 2022 ರ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಕೃತ್ತಿನ ಜಾಗೃತಿ ಕಾರ್ಯಕ್ರಮ

ಮಣಿಪಾಲ: ಯಕೃತ್ತಿನ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. ಯಕೃತ್ತು, ಮೆದುಳಿನ ನಂತರ ದೇಹದಲ್ಲಿ ಎರಡನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ಸಂಕೀರ್ಣವಾದ ಅಂಗವಾಗಿದೆ. ಯಕೃತ್ತು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಚಯಾಪಚಯ ಮತ್ತು ದೇಹದೊಳಗೆ ಪೋಷಕಾಂಶಗಳ ಸಂಗ್ರಹಣೆಗೆ ಸಂಬಂಧಿಸಿದ ಅನೇಕ ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಯಕೃತ್ತು ಮತ್ತು ಅದರ ರೋಗಗಳ ಬಗ್ಗೆ ಅರಿವು ಮೂಡಿಸಲು, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, […]