ತ್ರಿಶಾ ಕ್ಲಾಸಸ್: ಮೇ 20 ರಿಂದ ಸಿಎ ಫೌಂಡೇಶನ್ 21 ದಿನಗಳ ಕ್ರ್ಯಾಶ್ ಕೋರ್ಸ್

ಉಡುಪಿ: ಸಿ.ಎ, ಸಿ.ಎಸ್, ಎಂಬಿಎ, ಪದವಿ, ಪಿಯುಸಿ(ಕಾಮರ್ಸ್) ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಮೇ 20 ರಿಂದ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ. ಸಿಎ ಫೌಂಡೇಶನ್ ಸಂಬಂಧಿಸಿದ ವಿಷಯಗಳ ಕುರಿತಾಗಿ ಉಡುಪಿ, ಮಂಗಳೂರು, ಮುಂಬಯಿಯ ಪ್ರಸಿದ್ದ ಪ್ರಾಧ್ಯಾಪಕರ ನೇತೃತ್ವದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಈ ತರಬೇತಿ ಆಯೋಜಿಸಲಾಗಿದೆ. ಪ್ರತಿದಿನ ಸಿಎ ಫೌಂಡೇಶನ್ ಗೆತರಗತಿಗಳು ಜರುಗಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುಲಭ ವಿಧಾನದಿಂದ ಬಗೆ ಹರಿಸುವ ಕುರಿತು […]

ಬಾರಕೂರಿನ ಶ್ರೀ ಕಾಸನಾಡಿ ಸಿಟಿ ಟವರ್ ಶುಭಾರಂಭ: ಮೇ 20 ರಂದು ಉದ್ಘಾಟನಾ ಸಮಾರಂಭ

ಮೇ 20 ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಶ್ರೀ ಕಾಸನಾಡಿ ಸಿಟಿ ಟವರ್ ಮೈನ್ ರೋಡ್, ಬಾರಕೂರು ಇದರ ಉದ್ಘಾಟನಾ ಸಮಾರಂಭವು ನಡೆಯಲಿದೆ. ಉದ್ಘಾಟಿಸಲಿರುವವರು: ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾನ್ಯ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು: ಶ್ರೀ ಬಿ. ಶಾಂತರಾಮ ಶೆಟ್ಟಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಬಾರಕೂರು, ಶ್ರೀ ಎನ್. ಬಸವ ಶೆಟ್ಟಿ, ಮುಕ್ತೇಸರರು, ಕಾಸನಾಡಿ ಚಿಕ್ಕು ದೇವಸ್ಥಾನ, ನಾಗರಮಠ, ಬಾರಕೂರು ಶ್ರೀ ರಾಘವ ಶೆಟ್ಟಿ ಚಾಂಪಾಡಿ, ಅಧ್ಯಕ್ಷರು, ಹೊಸಾಳ […]

ವಿನಾಯಕ ಹೆಗಡೆ ಕಲಗದ್ದೆಗೆ ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ

ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರ ತಂದೆ, ಅರೆಹೊಳೆ ಗಣಪಯ್ಯ ಅವರ ಸ್ಮರಣಾರ್ಥ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿ, ‘ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ’ ಯ 2022 ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡ‌ಜಿಲ್ಲೆಯ ಸಿದ್ಧಾಪುರ ಸಮೀಪದ ಕಲಗದ್ದೆಯ ವಿನಾಯಕ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕಲಾವಿದರಾಗಿ, ಕಲಗದ್ದೆಯಲ್ಲಿ ಯಕ್ಷನಾಟ್ಯ ವಿನಾಯಕ ದೇವಸ್ಥಾನವನ್ನು ಸ್ಥಾಪಿಸಿ, ನಿರಂತರ ಕಲಾ ಸೇವೆಯನ್ನು ಮಾಡುತ್ತಿರುವ ಇವರು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಮೂಲಕ ಪ್ರದರ್ಶನಗಳನ್ನೂ […]

ಸೂಪರ್ ಮಾಮ್-ಸೀಸನ್ 4- ಸ್ಪರ್ಧಾ ವಿಜೇತೆಯಾಗಿ ಹೊರಹೊಮ್ಮಿದ ಜೋಸ್ಮಿತಾ ಡಿ’ಸಿಲ್ವಾ

ಮಂಗಳೂರು: ಮಾಮ್ಸ್ ಆಫ್ ಮಂಗಳೂರು (MOM) ಎಂಬ ಆನ್‌ಲೈನ್ ಗುಂಪೊಂದು, ಮಂಗಳೂರಿನ ಸುತ್ತಮುತ್ತಲಿನ ತಾಯಂದಿರಿಗೆ ಮೇ 8 ಭಾನುವಾರದಂದು ಫೋರಮ್ ಫಿಜಾ ಮಾಲ್‌ನಲ್ಲಿ ‘ಸೂಪರ್ ಮಾಮ್ 2022 – ಸೀಸನ್ 4’ ಸ್ಪರ್ಧೆಯನ್ನು ಆಯೋಜಿಸಿದ್ದು, ಹಲವಾರು ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಇಎಲ್‌ಸಿ (ಲಿವ್ ಯುವರ್ ಲರ್ನಿಂಗ್), ಸಿ.ಎಫ್.ಎ.ಎಲ್ (ಬಿ ಯುವರ್ ಬೆಸ್ಟ್) ವಹಿಸಿಕೊಂಡಿದ್ದರೆ, ಫೋರಮ್ ಫಿಜಾ ಮಾಲ್‌ನ ಸಹಯೋಗದೊಂದಿಗೆ ಬೋನ್ ಮಸಾಲಾ ಸಂಸ್ಥೆಯು ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಕಾರ್ಯಕ್ರಮವನ್ನು ಡ್ರೀಮ್ ಕ್ಯಾಚರ್ಸ್ […]

ಮಾತೃದಿನದಂದು ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ!

2019 ರ ಕೊರೋನಾ ಕಾಲದಲ್ಲಿ ‘ಇಡ್ಲಿ ಅಮ್ಮಾ’ ಎಂದೂ ಕರೆಯಲ್ಪಡುವ ಕೆ ಕಮಲಾತಾಲ್ ಎಂಬ ಮಹಿಳೆ ಲಾಕ್‌ಡೌನ್ ಸಮಯದಲ್ಲಿ ಕೇವಲ 1 ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುವ ಮೂಲಕ ಮನೆ ಮಾತಾಗಿದ್ದರು. 85 ವರ್ಷ ವಯಸ್ಸಿನ ಈಕೆ ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಬಗ್ಗೆ ವರದಿಗಳು ವೈರಲ್ ಆದ ಬಳಿಕ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಆಕೆಯ ಸಮರ್ಪಣೆಯಿಂದ ಪ್ರಭಾವಿತರಾಗಿ ಆಕೆಗೊಂದು ಮನೆ ನಿರ್ಮಿಸಿಕೊಡುವ ವಾಗ್ದನ ಮಾಡಿದ್ದರು. ತನ್ನ ವಾಗ್ದಾನಕ್ಕೆ ಬದ್ದರಾದ […]