ಅಪ್ಪಟ ಸ್ವದೇಶೀ ನಿರ್ಮಿತ ನಮ್ಮ ಊರಿನ ಬ್ರ್ಯಾಂಡ್ ಕ್ಯಾಂಪ್ಕೋ ಚಾಕಲೇಟ್!!

  ಆಗಿನ್ನೂ ದೇಶದಲ್ಲಿ ಕ್ಯಾಡ್ ಬರೀಸ್, ನೆಸ್ಲೆ ಕಿಟ್ ಕ್ಯಾಟ್ ನಂತಹ ಕಂಪನಿಗಳು ಮನೆ ಮಾತಾಗಿರಲಿಲ್ಲ. ನಾವು ಸಣ್ಣವರಿದ್ದಾಗ ನಾಲ್ಕಾಣೆ, ಎಂಟಾಣೆಯ ಚಿಕ್ಕ ಪುಟ್ಟ ಚಾಕಲೇಟುಗಳೇ ನಮಗೆ ಕ್ಯಾಡ್ ಬರಿ, ಕಿಟ್ ಕ್ಯಾಟ್ ಆಗಿದ್ದವು. ಮುಂಬೈ ಅಥವಾ ವಿದೇಶದಿಂದ ಯಾರಾದರೂ ಊರಿಗೆ ಬಂದಾಗ ಮಾತ್ರ ಫೈವ್ ಸ್ಟಾರ್, ಕ್ಯಾಡ್ ಬರಿಯಂತಹ ಚಾಕಲೇಟುಗಳ ದರ್ಶನ ಭಾಗ್ಯ ನಮಗಾಗುತ್ತಿತ್ತು. ಆಗ ಬರುತ್ತಿದ್ದ ಅದೆಷ್ಟೋ ಚಾಕಲೇಟುಗಳಲ್ಲಿ ನೀಲಿ ಬಣ್ಣದ ಜರಿಯಲ್ಲಿ ಒಂದು ಕೆಂಪು ಹೃದಯದ ಚಿತ್ರವಿರುವ ಕ್ಯಾಂಪ್ಕೋ ಚಾಕಲೇಟ್ ಅತ್ಯಂತ ಪ್ರಸಿದ್ದವಾಗಿತ್ತು. […]

ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿ ನಿಲ್ಲಿಸಿ

ವಿಳಂಬ ಪ್ರವೃತ್ತಿಯನ್ನು ನಿಲ್ಲಿಸಲು ಮೂರು ವಿಧಾನಗಳು # ಯೋಜನೆಗಳನ್ನು ಕಾರ್ಯಗತಗೊಳಿಸಬಹುದಾದ ಚಿಕ್ಕ ಕ್ರಿಯೆಗಳಾಗಿ ವಿಭಜಿಸಿಕೊಳ್ಳಿ # ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ನೀವು ನಂಬಿಕೆ ಇಟ್ಟಿರುವ ಯಾರನ್ನಾದರೂ ನೇಮಿಸಿಕೊಳ್ಳಿ # ನೀವು ಕಾರ್ಯವನ್ನು ಯಾಕೆ ಪ್ರಾರಂಭಿಸಿದಿರಿ ಮತ್ತು ಎಲ್ಲಿ ಹೋಗಲು ಬಯಸಿದ್ದೀರಿ ಎನ್ನುವುದನ್ನು ಪ್ರತಿದಿನವೂ ನೆನಪಿಸಿಕೊಳ್ಳಿ ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿಗೆ ಮುಕ್ತಿ ಹಾಡಿ -ತನುಜಾ ಮಾಬೆನ್, ಪ್ರದರ್ಶನ ತರಬೇತುಗಾರ್ತಿ, ಮನಸ್ಸಿನ ತರಬೇತುಗಾರ್ತಿ ಮತ್ತು ಚಿಕಿತ್ಸಕಿ, ಫಾರ್ರೇಡರ್ ಅಕಾಡೆಮಿ ಮಾಹಿತಿಗಾಗಿ ಸಂಪರ್ಕಿಸಿ: ಮುನ್ಸಿಪಲ್ ಕಾಂಪ್ಲೆಕ್ಸ್, […]

ಜುಲೈ 5ರಂದು ಬ್ರಹ್ಮಾವರದಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆ ಉದ್ಘಾಟನೆ

ಬ್ರಹ್ಮಾವರ: ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಸ್ಥಾಪಿಸಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆಯು ಜು. 5 ರಂದು ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್‌ ಕಟ್ಟಡದ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕುರಿತು ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಾಹಿತಿ ನೀಡಿದರು. ಸಹಕಾರಿಯು ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪುವಿನಲ್ಲಿ ಶಾಖೆಯನ್ನು ಹೊಂದಿದೆ‌. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್. ಕೃಷ್ಣ ರೆಡ್ಡಿ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಬಾರ್ಕೂರು ಕಚ್ಚೂರು ಶ್ರೀನಾಗೇಶ್ವರ […]

ಸಿನಿಮಾದಿಂದ ಭರವಸೆ ಮತ್ತು ನಂಬಿಕೆಯ ಪಾಠಗಳು: ಚಿತ್ರ ನಟ ಅನಿರುದ್ದ್ ಅವರ ಅನುಭವದ ಮಾತುಗಳು….

ನಾನು ಎಂ. ಎಸ್. ಸತ್ಯುರವರ ‘ಇಜ್ಜೋಡು’ (2010) ಚಲನಚಿತ್ರದಲ್ಲಿ ನಾಯಕ ಆನಂದನ ಪಾತ್ರ ನಿರ್ವಹಿಸಿದ್ದೆ. ನಾಯಕಿ ಚೆನ್ನಿ, ದೇವದಾಸಿಯಾಗಿರುವುದರಿಂದ (ಸಡಿಲವಾಗಿ ಅನುವಾದ ಮಾಡಿದರೆ ದೇವರ ಆಳು ಎಂದರ್ಥ) ತಾನು ಜನರಿಗೆ ಲೈಂಗಿಕ ಸೇವೆಗಳನ್ನು ಒದಗಿಸಬೇಕೆಂದು ನಂಬಿರುತ್ತಾಳೆ. ಇದು, ಕೇವಲ ಮುೂಢನಂಬಿಕೆ ಎಂದು ಆನಂದ ಅವಳಿಗೆ ಹೇಳುತ್ತಾನೆ. ಆಕೆ ನಿಜವಾಗಿಯೂ ಗಣಿಕೆ ಕೆಲಸ ಮಾಡುತ್ತಿರುವಳೆಂದೂ ಮತ್ತು ಶೋಷಣೆಗೆ ಒಳಗಾದವಳೆಂದೂ ತಿಳಿಸುತ್ತಾನೆ. ಈ ಕೆಲಸ ಬಿಟ್ಟು ಮದುವೆಯಾಗೆಂದೂ ಅವಳಿಗೆ ಸಲಹೆ ನೀಡುತ್ತಾನೆ. ಮೊದಲು ಆಘಾತಗೊಂಡ ಚೆನ್ನಿ, ಬೇಗನೇ ತಾನು ಯಾವ ಪ್ರಮಾದದೊಳಗೆ […]