ಮಂಗಳನ ಅಂಗಳದಿಂದ ನಕ್ಷತ್ರದಂತೆ ಹೊಳೆಯುವ ಭೂಮಿಯ ಕಂಡಿರಾ….

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯೂರಿಯಾಸಿಟಿ ನೌಕೆಯು ಮಂಗಳನ ಅಂಗಳದಲ್ಲಿದ್ದು, ಅಲ್ಲಿಂದ ರಾತ್ರಿ ಕಾಲದಲ್ಲಿ ಗಗನದಲ್ಲಿ ಮಿನುಗುವ ನಮ್ಮ ಭೂಮಿಯ ಚಿತ್ರವನ್ನು ಸೆರೆಹಿಡಿದಿದೆ. “ಮನೆಯಿಂದ 225 ಮಿಲಿಯನ್ ಕಿಮೀ ದೂರ, ಮಂಗಳದ ಮೇಲ್ಮೈಯಿಂದ ಭೂಮಿಯನ್ನು ನೋಡಿದಾಗ, ಮಂಗಳದ ರಾತ್ರಿ ಆಕಾಶದಲ್ಲಿ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಭೂಮಿ ಹೊಳೆಯುತ್ತದೆ” ಎಂದು ಕ್ಯೂರಿಯಾಸಿಟಿಯು ಟ್ವಿಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ.
ತನ್ನ ನಾಲ್ಕು ಮರಿಗಳ ಜೊತೆ ಸತ್ತ ಸಹೋದರಿಯ ಮೂರು ಮರಿಗಳನ್ನೂ ಸಾಕುತ್ತಿರುವ ಹುಲಿಯಮ್ಮ: ಕಾನನದಲ್ಲೊಂದು ಅಪರೂಪದ ಬಂಧನ!

ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯರಂತೆ ಕುಟುಂಬ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಮನುಷ್ಯನಂತೆ ಪ್ರಾಣಿಗಳಿಗೆ ಸಂಸಾರದ ಬಂಧನವಿಲ್ಲ. ಪ್ರಾಣಿ ಪ್ರಪಂಚದಲ್ಲಿ ಮಕ್ಕಳ ಲಾಲನೆ ಪಾಲನೆ ಎಲ್ಲವೂ ಹೆತ್ತಮ್ಮನದ್ದೇ ಆಗಿರುತ್ತದೆ. ಮರಿಯು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೂ ಅದರ ರಕ್ಷಣೆಯ ಜವಾಬ್ದಾರಿ ಹೊರುವ ತಾಯಿ, ಮರಿ ಸ್ವಾವಲಂಬಿ ಆದ ತಕ್ಷಣ ಅದನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತದೆ. ಒಂದು ವೇಳೆ ತಾಯಿ ಸತ್ತು ಹೋಯಿತೆಂದರೆ ಆ ಮರಿಯ ಜವಾಬ್ದಾರಿ ಅದರದ್ದೇ ಆಗಿರುತ್ತದೆ. ಆದರೆ, ಕಾಡಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಇಲ್ಲಿ ತನ್ನ […]
ಕೃಷ್ಣ ವೇಷ, ನೃತ್ಯ ಸ್ಪರ್ಧೆಯ ವಿಜೇತರಿಗೆ ಇಂಧನ ಸಚಿವರಿಂದ ಬಹುಮಾನ ವಿತರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಇವರ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ರಾಜ್ಯ ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ನಡೆದ ಕುಣಿದಾಡೋ ಕೃಷ್ಣ ಕುಣಿದಾಡೋ ನೃತ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ಕೃಷ್ಣನ ವೇಷ ಮತ್ತು ನೃತ್ಯ ಸ್ಪರ್ಧೆಯ ವಿಜೇತರಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ ಬಹುಮಾನ ವಿತರಿಸಿದರು. ಶ್ರೀ ವಿದ್ಯಾಸಾಗರ ತೀರ್ಥ […]
ಗೋಪಾಲಕೃಷ್ಣನಾಗಿ ಅಲಂಕೃತಗೊಂಡ ದೊಡ್ಡಣ್ಣ ಗುಡ್ಡೆ ಆದಿಶಕ್ತಿ ದುರ್ಗಾದೇವಿ

ದೊಡ್ಡಣ್ಣಗುಡ್ಡೆ: ಪ್ರಥಮ ಸೋಣ ಶುಕ್ರವಾರದಂದು, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಪಾಲಕೃಷ್ಣನಾಗಿ ಅಲಂಕೃತಗೊಂಡು ಭಕ್ತರನ್ನು ಅನುಗ್ರಹಿಸಿದ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ಆನಂದ ಬಾಯರಿ ಸ್ವಸ್ತಿಕ ಆಚಾರ್ಯ, ಅನೀಶ್ ಆಚಾರ್ಯ ಈ ಮನಮೋಹಕ ಅಲಂಕಾರವನ್ನು ಮಾಡಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಗೆ ನಾಡಿನ ಗಣ್ಯರಿಂದ ಶುಭಹಾರೈಕೆ..

ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಗೆ ನಾಡಿನ ಗಣ್ಯರಿಂದ ಶುಭಹಾರೈಕೆ..