ಶ್ರೀ ಗಣೇಶ ಚತುರ್ಥಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭ ಹಾರೈಕೆ..

ಶ್ರೀ ಗಣೇಶ ಚತುರ್ಥಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭ ಹಾರೈಕೆ…
ರಾಜ್ಯದ ರೈತರ ಮೊಗದಲ್ಲಿ ಸಂತಸ ಮೂಡಿಸುತ್ತಿವೆ ತೆಂಗಿನಕಾಯಿ ಚಿಪ್ಪುಗಳು

ಬೆಂಗಳೂರು: ದೇಶಾದ್ಯಂತ ವಿವಿಧ ಕೈಗಾರಿಕೆಗಳಲ್ಲಿ ಸಕ್ರಿಯ ಇಂಗಾಲ ಮತ್ತು ಇದ್ದಿಲಿನ ಬಳಕೆ ಹೆಚ್ಚಿದ್ದರಿಂದ ತೆಂಗಿನಕಾಯಿ ಚಿಪ್ಪಿಗೆ ಬಹುಬೇಡಿಕೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಟನ್ ತೆಂಗಿನ ಚಿಪ್ಪಿನ ಬೆಲೆ ಬಹುತೇಕ ದುಪ್ಪಟ್ಟಾಗಿದೆ. ಈ ಹಿಂದೆ 7,000 ದಿಂದ 8,000 ರೂ.ನಲ್ಲಿ ಲಭ್ಯವಿದ್ದ ತೆಂಗಿನ ಚಿಪ್ಪಿಗೆ ಈಗ ಒಂದು ಟನ್‌ಗೆ ಸುಮಾರು 14,500 ರೂ. ಅಥವಾ ಅದಕ್ಕೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಈ ಚಿಪ್ಪುಗಳನ್ನು ಸಂಸ್ಕರಿಸುವ ಕೈಗಾರಿಕೆಗಳು ಅವುಗಳನ್ನು ಕರಕುಶಲ ಕಲೆಗಾರಿಕೆ, ಅಗರಬತ್ತಿಗಳು ಮತ್ತು ಜೈವಿಕ ಗೊಬ್ಬರಗಳಲ್ಲಿ […]
ಮಂಗಳೂರು: ಆಗಸ್ಟ್ 30 ರಂದು ಪ್ರಸಾದ್ ನೇತ್ರಾಲಯ ಸಂಚಾರಿ ನೇತ್ರ ಚಿಕಿತ್ಸಾಲಯ ಉದ್ಘಾಟನೆ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ನೇತ್ರ ಚಿಕಿತ್ಸೆ ಕೇಂದ್ರಗಳ ಅತಿ ದೊಡ್ಡ ನೆಟ್ ವರ್ಕ್ ಹೊಂದಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ತನ್ನ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನಿರಂತರವಾಗಿ ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ಸಮುದಾಯ ಸೇವೆಗಳನ್ನು ಕಳೆದ 12 ವರ್ಷಗಳಿಂದ ನೀಡುತ್ತಿದೆ. ರಾಜ್ಯದ 7 ಜಿಲ್ಲೆಯನ್ನೊಳಗೊಂಡಂತೆ ದೇಶದ 4 ರಾಜ್ಯಗಳಲ್ಲಿ ಶಿಬಿರಗಳನ್ನು ನಡೆಸುತ್ತಾ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಮೂಲಕ ಜನರ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ […]
ಆ.31: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ

ಕುಂದಾಪುರ: ಕುಂದಾಪುರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ವಿನಾಯಕ ಚತುರ್ಥಿಯ ಪ್ರಯುಕ್ತ ಆ.31 ರಂದು ಅಷ್ಟೋತ್ತರ ಸಹಸ್ರ ನಾಲಿಕೇರ ಗಣಪತಿ ಯಾಗ ಜರಗಲಿದೆ. ಆ.30 ಮತ್ತು 31 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈ-ರಾಯಚೂರು ರೈಲಿನಲ್ಲಿ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್

ದೇಶದ ವಿತ್ತ ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಾಮಾನ್ಯರಂತೆಯೆ ರೈಲಿನಲ್ಲಿ ಪ್ರಯಾಣಿಸಿದ್ದು, ಮುಂಬೈನಿಂದ ರಾಯಚೂರಿಗೆ ತನ್ನ ರೈಲು ಪ್ರಯಾಣದ ಸಮಯದಲ್ಲಿ ಹಮ್ಮು-ಬಿಮ್ಮುಗಳಿಲ್ಲದೆ ಸಹ-ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಗಳನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿಯು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.