ಸಾಸ್ತಾನ: ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆ

ಸಾಸ್ತಾನ: ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಕಬೆಟ್ಟು ಪ್ರದೇಶದ ಶ್ರೀನಿವಾಸ ಭಟ್ ಅವರ ಮನೆಯ ಹಿಂಭಾಗದ ಬಾವಿಯ ಸಮೀಪದಲ್ಲಿ 14 ನೇ ಶತಮಾನದ ಶಾಸನವನ್ನು ಇತಿಹಾಸ‌ ಮತ್ತು ಪುರಾತತ್ವ ವಿದ್ವಾಂಸರಾದ ಡಾ. ಎಸ್.ಜಿ. ಸಾಮಕ್ ಅವರು ಪತ್ತೆ ಮಾಡಿದ್ದು, ಇದನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 180 ಸೆಂ.ಮೀ ಎತ್ತರ 60 ಸೆಂ.ಮೀ ಅಗಲವಿದೆ. ಶಾಸನದ ಮೇಲ್ಬಾಗದಲ್ಲಿ ಬ್ರಾಹ್ಮಣ […]

ಬ್ರಹ್ಮಾವರ: ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ವಾಟ್ಸಾಪ್ ಬಳಗ

ಬ್ರಹ್ಮಾವರ: ಸತೀಶ್ ಎಸ್. ಕಾಡೋಲಿ, ಸುಶಾಂತ್ ಕಾಡೋಲಿ, ಪ್ರಮೋದ ಹೇರೂರು, ಪ್ರಶಾಂತ್ ಕಾಡೋಲಿ ಅವರ ನೇತ್ರತ್ವದ ಹೇರೂರು ಶಾಲೆ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮತ್ತು ಮಾಕ್ಷಿಮ್ ಮಸ್ಕರೇನ್ಹಸ್ ನೇತೃತ್ವದ ದೇವರ ಮಕ್ಕಳು ಗ್ರೂಪ್ ಜಂಟಿಯಾಗಿ ಬ್ರಹ್ಮಾವರ ಸಮೀಪದ ಹೇರೂರಿನ ಬಡ ಮಹಿಳೆ ಪ್ರೇಮ ಪೂಜಾರ್ತಿ ಅವರಿಗೆ ಉಚಿತವಾಗಿ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆಯ ಮೆರೆದಿದೆ. ಪ್ರೇಮ ಅವರು ಶಿಥಿಲಗೊಂಡಿದ್ದ ಮನೆಯಲ್ಲಿ ವಾಸವಾಗಿದ್ದರು. ಇದನ್ನು ಮನಗಂಡ ವಾಟ್ಸಪ್ ಬಳಗವು ನೂತನ ಮನೆಯನ್ನು ನಿರ್ಮಿಸಿ ಪ್ರೇಮ ಅವರಿಗೆ ಮನೆ ಹಸ್ತಾಂತರ […]

ಉಡುಪಿ: ವೀಕೆಂಡ್ ಕರ್ಪ್ಯೂ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಡಿಸಿ ಕೂರ್ಮ ರಾವ್

ಉಡುಪಿ: ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಉಡುಪಿಯ ನೂತನ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ ಹೇಳಿದ್ದಾರೆ. ಇಂದು ಉಡುಪಿ ಸರಕಾರಿ ಬಾಲಕಿಯರ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನರ, ಜನಪ್ರತಿನಿಧಿಗಳ ಭಾವನೆ ಅರಿತುಕೊಂಡು ಅದರಂತೆ ಕೆಲಸ ಮಾಡುತ್ತೇನೆ‌ ಎಂದರು. ಇಂದಿನಿಂದ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭವಾಗಿದೆ. ಮಕ್ಕಳ ಜೊತೆ […]

ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ: ಜನಸಾಮಾನ್ಯರು ಕಂಗಾಲು

ನವದೆಹಲಿ: ಎಲ್ ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ₹ 25 ಹೆಚ್ಚಳವಾಗಿದೆ‌. ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆಜೆ ತೂಕದ ಸಿಲೆಂಡರ್ ಗೆ 884 ರೂಪಾಯಿ 50 ಪೈಸೆಯಾಗಿದೆ. ಹೊಸ ದರ ಇಂದೇ ಜಾರಿಗೆ ಬರಲಿದ್ದು, ಇನ್ನು 19 ಕೆಜಿ ಕಮರ್ಷಿಯಲ್ ಸಿಲೆಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದೆ. ಕಳೆದ 15 ದಿನಗಳ ಅಂತರದಲ್ಲಿ 50 ರೂಪಾಯಿಯಷ್ಟು ಅಡುಗೆ ಅನಿಲ ದರ ಏರಿಕೆಯಾಗಿದೆ. ಕಳೆದ ಜನವರಿ 1ರಿಂದ ದೇಶದಲ್ಲಿ ಅಡುಗೆ […]

ಕೊಡವೂರು: ವಿದ್ಯಾರ್ಥಿಗಳ ಆನ್ಲೈನ್ ತರಗತಿಯ ಅನುಕೂಲಕ್ಕಾಗಿ ನೂತನ ಜಿಯೊ ಟವರ್ ಅಳವಡಿಕೆ

ಕೊಡವೂರು: ಕೊಡವೂರು ವಾರ್ಡ್ ನ ಪಾಳೆಕಟ್ಟೆ, ಲಕ್ಷ್ಮೀನಗರ, ಗರ್ಡೆ ವಠಾರದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದ್ದು, ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒನ್ಲೈನ್ ತರಗತಿಗಳಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಮನಗಂಡ ಸ್ಥಳೀಯ ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಹಾಗೂ ಗೆಳೆಯರ ಬಳಗ ಗರ್ಡೆ ಲಕ್ಷ್ಮೀನಗರ ಇವರ ಸಹಕಾರದೊಂದಿಗೆ ನಗರಸಭಾ ಸದಸ್ಯ ವಿಜಯ ಕೊಡವೂರು ಅವರ ನೇತೃತ್ವದಲ್ಲಿ ರಿಲಯನ್ಸ್ ಜಿಯೋ ನೆಟ್ ವರ್ಕ್ ಕಂಪನಿಯ ವತಿಯಿಂದ ಲಕ್ಷ್ಮೀನಗರ ವಠಾರದಲ್ಲಿ ನೂತನ ಮೊಬೈಲ್ ಟವರ್ ಸ್ಥಾಪಿಸಲಾಯಿತು. ಅದರ ಉದ್ಘಾಟನಾ […]