ದ.ಕ: ವಿವಿಧೆಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಗೋವಾ ಸಿಎಂ ಪ್ರಮೋದ್ ಸಾವಂತ್ ಧರ್ಮಸ್ಥಳ ಭೇಟಿ

ಬೆಳ್ತಂಗಡಿ: ದ.ಕ. ಜಿಲ್ಲೆಯಾದ್ಯಂತ ಇಂದು (ಮಾ.12) ಬಿಜೆಪಿ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹಿತ ರಾಜ್ಯದ ಪ್ರಮುಖರು ಬೆಳ್ತಂಗಡಿಗೆ ಆಗಮಿಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಹಿನ್ನೆಲೆ ಮಂಗಳೂರಿನಿಂದ ಆಗಮಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರ್ಯಾಲಿ ನಡೆಸುವ ಹಿನ್ನೆಲೆ ಅವರು ಇದೀಗ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಅವರು ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ […]

ಮಂಗಳೂರು: ಎಮ್ ಸಿ ಸಿ ಬ್ಯಾಂಕ್ ನಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ದಿನಾಂಕ 11 ಮಾರ್ಚ್ 2023 ರಂದು ಮಂಗಳೂರಿನ ಎಮ್ ಸಿ ಸಿ ಪ್ರಧಾನ ಕಛೇರಿಯ ಪಿ ಎಫ್ ಎಕ್ಸ್ ಸಲ್ದಾನ್ಹಾ ಮೆಮೊರಿಯಲ್ ಸಂಭಾಗಣದಲ್ಲಿ ಮಹಿಳಾ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಎಮ್ ಸಿ ಸಿ ಬ್ಯಾಂಕ್ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಂದನೀಯ ಸಿಸಿಲಿಯಾ ಮೆಂಡೋನ್ಕಾ ಬಿ.ಎಸ್., ಪ್ರಾಂತೀಯ ಸುಪೀರಿಯರ್, ಬೆಥನಿ ಸಭೆ, ವಾಮಂಜೂರು, ಮಂಗಳೂರು. ಬ್ಯಾಂಕಿನ ನಿರ್ದೇಶಕರಾದ ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಎಫ್.ಡಿಸೋಜಾ, ಶರ್ಮಿಳಾ ಮಿನೇಜಸ್, ಶಾಖಾ ವ್ಯವಸ್ಥಾಪಕರು: ಜೆಸಿಂತಾ […]

ಸಾಹಿತ್ಯ ಅಕಾಡೆಮಿ ದೆಹಲಿ ಕೊಂಕಣಿ ಭಾಷಾ ಮುಖ್ಯಸ್ಥರಾಗಿ ಮಂಗಳೂರು ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ

ಕೊಂಕಣಿ ಕವಿ, ಕಾರ್ಯಕರ್ತ ಹಾಗು ಕೊಂಕಣಿ ಕಾವ್ಯದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಇದರ ಸ್ಥಾಪಕ ಕರಾವಳಿ ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿ, ದೆಹಲಿಯಲ್ಲಿ ಕೊಂಕಣಿ ಭಾಷೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇಂದು ದಿನಾಂಕ 11 ಮಾರ್ಚ್ 2023 ರಂದು, ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿ ಜನರಲ್ ಕಾವ್ನ್‌ಸಿಲ್ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಕೊಂಕಣಿ ಭಾಷೆಯ ಇತಿಹಾಸದಲ್ಲೆ […]

ಮಾ.13ಕ್ಕೆ ಇತಿಹಾಸ ಪ್ರಸಿದ್ಧ ಸೂರಾಲು ಮಾಗಣಿಯ ನಂಚಾರು ಗ್ರಾಮಕ್ಕೆ ಚರಿತ್ರೆಯಲ್ಲಿ ಮೊದಲ ಬಾರಿಗೆ ಶೃಂಗೇರಿ ಶ್ರೀ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿಯವರ ಆಗಮನ

ಬ್ರಹ್ಮಾವರ: ಪ್ರಸಿದ್ಧ ಸೂರಾಲು ಮಾಗಣಿ ನಂಚಾರು ಗ್ರಾಮಕ್ಕೆ ಮೊಟ್ಟ ಮೊದಲ ಬಾರಿ ಶೃಂಗೇರಿ ಮಠ ಕಿರಿಯ ಯತಿ ಶ್ರೀ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ ಮಾ.13 ರಂದು ಸಂಜೆ 4ಕ್ಕೆ ಆಗಮಿಸಲಿದ್ದು, ನಂಚಾರು ಶ್ರೀ ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಅನಾಥ ಗೋವುಗಳ ಆಶ್ರಯ ತಾಣ ಗಂಜಿ ಆಶ್ರಮಕ್ಕೆ ಭೇಟಿ ನೀಡಿ ಗೋಗ್ರಾಸ ಸಮರ್ಪಣೆ ಮಾಡಲಿದ್ದಾರೆ. ಸ್ವಾಮೀಜಿ ಭೇಟಿ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾದಪೂಜೆ, ಆಶೀರ್ವಚನ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ ಎಂದು […]

ತ್ರಾಸಿ ಜಂಕ್ಷನ್ ಬಳಿ ಅಗ್ನಿ ಅನಾಹುತ: ತಪ್ಪಿದ ಭಾರೀ ಅನಾಹುತ

ಕುಂದಾಪುರ ತಾಲೂಕಿನ ಮರಬಂತೆ ಸಮೀಪದ ತ್ರಾಸಿ ಜಂಕ್ಷನ್ ಬಳಿ ಇಂದು ಅಗ್ನಿ ಅವಘಡ ಸಂಭವಿಸಿದೆ. ತ್ರಾಸಿ ಜಂಕ್ಷನ್ ಬಳಿಯ ಹುಲ್ಲುಗಾವಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಬಳಿಕ ಇದು ಸುತ್ತಲಿನ ಪ್ರದೇಶಕ್ಕೆ ಹಬ್ಬಿದೆ. ಇದರಿಂದ ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿತ್ತು. ಸ್ಥಳಕ್ಕೆ ಆಗಮಿಸಿದ ಬೈಂದೂರು ಅಗ್ನಿಶಾಮಕ ದಳ, ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ, ಗಂಗೊಳ್ಳಿ ಆಂಬ್ಯುಲೆನ್ಸ್ ಇಬ್ರಾಹಿಂ ಹಾಗೂ ಸಾರ್ವಜನಿಕರ ಸಹಕಾರದಿಂದ ಬೆಂಕಿ ಹತೋಟಿಗೆ ತರಲಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ‌ ಎಂದು ತಿಳಿದುಬಂದಿದೆ.