ವಸತಿ ಶಾಲೆಗಳ ಪ್ರವೇಶ ಪರೀಕ್ಷೆ: ನಿಷೇಧಾಜ್ಞೆ

ಉಡುಪಿ: ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರವೇಶಾತಿಗೆ ಪ್ರವೇಶ ಪರೀಕ್ಷೆಯು ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳಾದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 12 ರಂದು ನಡೆಯಲಿದ್ದು, ಪರೀಕ್ಷೆಯು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗಧಿಪಡಿಸಿದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು […]

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮಾ.13 ರಂದು ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನೂತನ ಬ್ರಹ್ಮರಥದ ಲೋಕಾರ್ಪಣೆ, ವಿಶೇಷ ರಥೋತ್ಸವ ಮಾ.13 ರಂದು ನಡೆಯಲಿದೆ. ನೂತನ ಬ್ರಹ್ಮರಥದ ಸೇವಾಕರ್ತರು ನೀಲಾವರ ಮಕ್ಕಿತೋಟಮನೆ ಶ್ರೀಮತಿ ಗೌರಿ ವಿಠಲ ಶೆಟ್ಟಿ ಹಾಗೂ ಮನೆಯವರು. ಮಾ.9 ರಿಂದ ಮಾ.15 ರವರೆಗೆ ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಲಿವೆ. 09/03/2023: ಮುಹೂರ್ತ ಬಲಿ 10/03/2023: ವಿಘ್ನೇಶ್ವರ ಪ್ರಾರ್ಥನೆ, ಅಂಕುರಾರೋಪಣ 11/03/2023: ಧ್ವಜಾರೋಹಣ (ಬೆಳಿಗ್ಗೆ 7.45ಕ್ಕೆ) ಸಂಜೆ: ಸಿಂಹ ವಾಹನೋತ್ಸವ, ಭೇರಿತಾಡನ 12/03/2023: ಗಜವಾಹನೋತ್ಸವ, ಸ್ಥಾನ ಶುದ್ಧಿ, ಪ್ರಾಸಾದ […]

ಮೂರನೇ ಮಾಸಿಕ “ಉನ್ನತಿ ಉದ್ಯೋಗ ಮೇಳ”ದಲ್ಲಿ ನೂರಾರು ಉದ್ಯೋಗ ಅವಕಾಶ ಸೃಷ್ಟಿ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಸುಪ್ರಸಿದ್ಧ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದ್ದು, ಇಂದು ತನ್ನ ಕ್ಯಾಂಪಸ್ ನಲ್ಲಿ ಮೂರನೇ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನೂರಾರು ಉದ್ಯೋಗಾಕಾಂಕ್ಷಿಗಳು ನೇರ ಹಾಗೂ ಆನ್ ಲೈನ್ ಸಂದರ್ಶನ ಮೂಲಕ ವಿವಿಧ ಕ್ಷೇತ್ರಗಳ ಕಂಪೆನಿಗಳಲ್ಲಿ ಉದ್ಯೋಗ […]

ಚುನಾವಣಾ ಜಾಗೃತಿ ಕುರಿತು ತಾಲೂಕು ಮಟ್ಟದ ಭಿತ್ತಿ ಚಿತ್ರಕಲಾ ಸ್ಪರ್ಧೆ

ಉಡುಪಿ: ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಚುನಾವಣಾ ಜಾಗೃತಿ (ಸ್ವೀಪ್) ಕಾರ್ಯಕ್ರಮದಡಿ ತಾಲೂಕು ಮಟ್ಟದ ಸಾರ್ವಜನಿಕ ಭಿತ್ತಿ ಚಿತ್ರಕಲಾ ಸ್ಪರ್ಧೆಯು ಮಾರ್ಚ್ 24 ರಂದು ಪ್ರತಿ ತಾಲೂಕು ಕೇಂದ್ರಗಳ ನಿರ್ದಿಷ್ಟ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ಮಾರ್ಚ್ 10 ರಿಂದ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಗೂಗಲ್ ಫಾರ್ಮ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ನಿಯಮಗಳು: ಚಿತ್ರಗಳನ್ನು ಮತದಾನ ಕೇಂದ್ರದ ಗೋಡೆಗಳಲ್ಲಿ ರಚಿಸಬೇಕು. ಸ್ಪರ್ಧೆಯಲ್ಲಿ ಚಿತ್ರ ರಚಿಸಲು ಅವಶ್ಯವಿರುವ ಬಣ್ಣಗಳನ್ನು […]

ಮೇ ಮೊದಲ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಚಿವ ನಾಗೇಶ್

ತಿಪಟೂರು: ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು ಸುಸೂತ್ರವಾಗಿ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ತ್ತು ಸಾಕ್ಷರತಾ ಇಲಾಖೆ ಸಚಿವ ನಾಗೇಶ್ ಅವರು ತಿಳಿಸಿದ್ದಾರೆ. ರಾಜ್ಯದ 1109 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಸಂಬಂಧ ಅಗತ್ಯ ಇರುವ ಎಲ್ಲ ಸಿದ್ದತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಮೇ ಮೊದಲ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ. ತಿಪಟೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಬಳಿಕ ನಾಗೇಶ್ ಅವರು ಈ ಮಾಹಿತಿ […]