ಭಾರತದ ಐತಿಹಾಸಿಕ ಸಾಧನೆಯ ಹಿನ್ನೋಟ : ಏಷ್ಯನ್​ ಗೇಮ್ಸ್​​ 2023

ಹೈದರಾಬಾದ್: ಈ ವರ್ಷದ ಸೆಪ್ಟೆಂಬರ್ ​ – ಅಕ್ಟೋಬರ್​ ತಿಂಗಳಲ್ಲಿ ಚೀನಾದ ಹ್ಯಾಂಗ್​ಝೌನಲ್ಲಿ ನಡೆದ ಏಷ್ಯನ್​ ಗೇಮ್ಸ್​ ಭಾರತದ ಪಾಲಿಗೆ ಅವಿಸ್ಮರಣೀಯ.ಈ ವರ್ಷ ನಡೆದ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿ ದಾಖಲೆ ನಿರ್ಮಿಸಿದೆ. ಈ ಅವಿಸ್ಮರಣೀಯ ಕ್ರೀಡಾ ಕೂಟದ ಹಿನ್ನೋಟ. ನಮ್ಮ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯಗಳು ಮತ್ತು 4 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಕ್ರೀಡಾ ಕೂಟದಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕವನ್ನು ಬಾಚಿಕೊಂಡು ದಾಖಲೆ […]

ಬೆಂಗಳೂರು ಟನೆಲ್ ಯೋಜನೆಗೆ ನೆರವು ನೀಡಲು ಮನವಿ : ನಿರ್ಮಲಾ ಸೀತಾರಾಮನ್ ಭೇಟಿಯಾದ ಅವರನ್ನು ಡಿಕೆಶಿ

ದೆಹಲಿ/ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬೆಂಗಳೂರು ಸಂಬಂಧಿತ ಮೂರು ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.ರಾಜ್ಯದ ಪ್ರಮುಖ ಮೂರು ಯೋಜನೆಗಳು ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಗರ ಸುರಂಗ ಮಾರ್ಗ: ವಿಶೇಷವಾಗಿ ಉದ್ದೇಶಿತ ಬೆಂಗಳೂರು ಸುರಂಗ ಮಾರ್ಗಕ್ಕೆ ಅನುದಾನ ನೀಡುವಂತೆ ಡಿಕೆಶಿ […]

2023ರಲ್ಲಿ ಇಸ್ರೋ ಅಪ್ರತಿಮ ಸಾಧನೆ : ಚಂದ್ರಯಾನ-3 ಯಶಸ್ವಿ, ಸೂರ್ಯನತ್ತ ಪಯಣ

ಹೈದರಾಬಾದ್: 2023ರ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.2023ನೇ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ವರ್ಷವಾಗಿ ದಾಖಲಾಗಿದೆ. ಇಸ್ರೋದ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ಒಂದು ಅವಲೋಕನ. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಮಾಡಿದ ಮೊದಲ ರಾಷ್ಟ್ರ ಮತ್ತು ಒಟ್ಟಾರೆ ಚಂದ್ರನ ಮೇಲಿಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಭಾರತದ ಸಾಧನೆ ಅಪ್ರತಿಮವಾದುದು. ವಿಕ್ರಮ್ ಲ್ಯಾಂಡರ್ ಮತ್ತು […]

ಹುಲಿ ಉಗುರು ಸಹಿತ ಅರಣ್ಯ ಜೀವಿ ವಸ್ತುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ಚಿಂತನೆ

ಬೆಂಗಳೂರು: ಹುಲಿ ಉಗುರು ಸಹಿತ ಅರಣ್ಯ ಜೀವಿ ವಸ್ತುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಒಪ್ಪಿಸಿ ಮುಂಬರುವ ಆಪತ್ತು ತಪ್ಪಿಸಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಅರಣ್ಯ ಇಲಾಖೆಗೆ ಒಪ್ಪಿಸುವ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಸಮಾಲೋಚನೆ ನಡೆಸಿದ್ದಾರೆ. ಜನರು ತಮ್ಮಲ್ಲಿರುವ ವನ್ಯಜೀವಿ ವಸ್ತುಗಳನ್ನು ಕರ್ನಾಟಕ ಅರಣ್ಯ ಇಲಾಖೆಗೆ ಒಪ್ಪಿಸುವಂತೆ ನಿಯಮ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ಎಜಿ ಶಶಿಕಿರಣ್ […]

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಲಾಂಛನದಲ್ಲಿ ಕನ್ನಡ ಬಳಕೆ

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಲಾಂಛನವು ಸಂಪೂರ್ಣ ಆಂಗ್ಲ‌ ಭಾಷೆಯಲ್ಲಿತ್ತು. ಈ ಬಗ್ಗೆ ತಮ್ಮ‌ ಗಮನಕ್ಕೆ ಬರುತ್ತಿದ್ದಂತೆ, ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ‌ ಸಚಿವರಾದ ಶಿವರಾಜ್ ತಂಗಡಗಿ ಅವರು ವಿಮಾನ‌ ನಿಲ್ದಾಣದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ‌ ಸೂಚನೆ ಬೆನ್ನಲ್ಲೇ ‌ಎಚ್ಚೆತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ‌ ಅಧಿಕಾರಿಗಳು ನಿಲ್ದಾಣದ ಲಾಂಛನದಲ್ಲಿ ಕನ್ನಡವನ್ನು ಬಳಸಿಕೊಂಡಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಲಾಂಛನದಲ್ಲಿ ಕನ್ನಡ ಬಳಕೆ ಮಾಡಿಕೊಳ್ಳಲಾಗಿದೆ. ಅದರಂತೆ ಕನ್ನಡ ಅಭಿವೃದ್ಧಿ ‌ಪ್ರಾಧಿಕಾರದ‌ […]