ಕಾಡುಬೆಟ್ಟು ಹುಲಿವೇಷ ತಂಡದ ರೂವಾರಿ ಕಾಡುಬೆಟ್ಟು ಅಶೋಕ್ ರಾಜ್ ತೀವ್ರ ನಿಗಾ ಘಟಕದಲ್ಲಿ

ಉಡುಪಿ: ಇಲ್ಲಿನ ಕಾಡುಬೆಟ್ಟು ನಿವಾಸಿ ಸಂಪ್ರಾದಾಯಕ ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಗಣೇಶ ಚತುರ್ಥಿಯಿಂದ ಕೇರಳ, ಹುಬ್ಬಳ್ಳಿ, ತುಮಕೂರು, ಮತ್ತು ಬೆಂಗಳೂರಿನ ಆಯ್ದ ಕಡೆಗಳಲ್ಲಿಎಡೆಬಿಡದೆ ಹುಲಿವೇಷ ಧರಿಸಿದ ಕುಣಿತದ ತಂಡದೊಂದಿಗೆ ತಿರುಗಾಟ ನಡೆಸುತ್ತಿದ್ದ ಅಶೋಕ್ ತಂಡವು ಶುಕ್ರವಾರದಂದು ತಮ್ಮ ಕೊನೆಯ ಪ್ರದರ್ಶನ ನೀಡಲಿತ್ತು. ಆದರೆ ಇಷ್ಟರಲ್ಲೇ ಊಟದ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದ ಅಶೋಕ್ ಅವರನ್ನು ತಕ್ಷಣ ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ತ್ರೀವ್ರ ಉಸಿರಾಟದ ತೊಂದರೆಯಿಂದ […]

ಕಾರ್ಕಳ: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಚಿರತೆ ಸಾವು

ಕಾರ್ಕಳ: ಕಾಡಿನ ಮಧ್ಯದಿಂದ ಹಠಾತ್ತನೆ ಚಿರತೆಯೊಂದು ರಸ್ತೆಗೆ ನುಗ್ಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆ ಪರಿಣಾಮ ಸಾವನಪ್ಪಿದೆ. ಘಟನೆಯು ಹೆಬ್ರಿ ತಾಲೂಕಿನ ಮುದ್ರಾಡಿ ಕಾರ್ಕಳ ರಸ್ತೆಯ ಭಕ್ರೆ ಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಕಾರ್ಕಳದಿಂದ ಮುದ್ರಾಡಿ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ರಸ್ತೆ ಕಡೆಗೆ ಹಠಾತ್ತಾಗಿ ನುಗ್ಗಿದ ಚಿರತೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ […]

ನೇತ್ರಾವತಿ ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳ್ಳತನ: ನಾಲ್ಕು ಗಂಟೆಯೊಳಗಾಗಿ ಕಳ್ಳನ ಪತ್ತೆ ಹಚ್ಚಿದ ಪೊಲೀಸರು

ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ ಕದ್ದು ಪರಾರಿಯಾಗಿದ್ದ ಕಳ್ಳನನ್ನು ರೈಲ್ವೆ ಪೊಲೀಸರು ದೂರು ದಾಖಲಿಸ್ದ ನಾಲ್ಕು ಗಂಟೆಗಳೊಳಗಾಗಿ ಬಂಧಿಸಿದ್ದಾರೆ. ದಿಲ್ಲಿ ನಿವಾಸಿ ಸನ್ನಿ ಮಲ್ಹೋತ್ರಾ (30) ಬಂಧಿತ ಆರೋಪಿಯಾಗಿದ್ದಾನೆ. ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬ ಮಹಿಳೆ ಬುಧವಾರ S7 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗ್‌ ತೋಕೂರು ನಿಲ್ದಾಣದ ಬಳಿ ಕಳ್ಳತನವಾಗಿತ್ತು. ಬ್ಯಾಗಿನಲ್ಲಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದವು. ಈ ಕುರಿತು ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ […]

ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ: ನಿರ್ವಾಹಕರು ಹಾಗೂ ಕ್ಲೀನರ್‌ಗಳಿಂದ ನೋಂದಣಿ ಆಹ್ವಾನ

ಉಡುಪಿ: ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿದ್ದು, ಇಂತಹ ಕಾರ್ಮಿಕರು ಅಪಘಾತಕ್ಕಿಡಾಗಿ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ […]

ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ: 2023-24 ಆರ್ಥಿಕ ವರ್ಷಕ್ಕೆ ಜಿಡಿಪಿ 6.5 ಶೇಕಡಾ; 5.4 ಶೇ. ಹಣದುಬ್ಬರ

ನವದೆಹಲಿ: ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 6.5 ಪ್ರತಿಶತದಲ್ಲಿ ಯಥಾಸ್ಥಿತಿಯಲ್ಲಿಡಲು ಸರ್ವಾನುಮತದಿಂದ ನಿರ್ಧರಿಸಿದೆ. ಕೇಂದ್ರ ಬ್ಯಾಂಕ್ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿರಿಸಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ. ಆರ್ಥಿಕ ವರ್ಷ 24ರ ಜಿಡಿಪಿ ಅಂದಾಜು 6.5 ಶೇಕಡಾದಲ್ಲಿ ಉಳಿಸಿಕೊಂಡಿರುವ ಆರ್.ಬಿ.ಐ 2023-24 ಕ್ಕೆ ಹಣದುಬ್ಬರ ಪ್ರಕ್ಷೇಪಣವನ್ನು 5.4 ಶೇಕಡಾದಲ್ಲಿ ಬದಲಾಯಿಸದೆ ಇರಿಸಿದೆ. ಶುಕ್ರವಾರ ಆರ್ಥಿಕ ವರ್ಷ 24 ರ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಸ್ತುತಪಡಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “ನಮ್ಮ ವಿತ್ತೀಯ ನೀತಿಯು […]