ನೇರವಾಗಿ ದ್ವಿತೀಯ ಪಿಯುಸಿ ಬರೆಯಲು ಉತ್ತಮ ಅವಕಾಶ: ಸುವಿದ್ಯಾ ಅಕಾಡೆಮಿಯಲ್ಲಿ ಕೋಚಿಂಗ್ ಕ್ಲಾಸ್ ಗಳು ಲಭ್ಯ

ಉಡುಪಿ: ಇಲ್ಲಿನ ಪೇಜಾವರ ಮಠದ ಪ್ರಹ್ಲಾದ ಗೋಕುಲದಲ್ಲಿರುವ ಸುವಿದ್ಯಾ ಅಕಾಡೆಮಿಯಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋಚಿಂಗ್ ಕ್ಲಾಸ್ ಗಳನ್ನು ನಡೆಸಲಾಗುವುದು. ವಿಜ್ಞಾನ-ಪಿಸಿಎಂಬಿ/ ಸಿ ಹಾಗೂ ವಾಣಿಜ್ಯ-ಎಚ್.ಎ.ಎ.ಬಿ/ಸಿ ವಿಷಯಗಳಲ್ಲಿ ನೇರವಾಗಿ ಪರೀಕ್ಷೆ ಬರೆಯಬಹುದು. ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು. ನಿಯಮಿತ ತರಗತಿಗಳು ಕೈಗೆಟಕುವ ಶುಲ್ಕದಲ್ಲಿ ಲಭ್ಯ. ಇದಲ್ಲದೆ, 7, 8, 9, 10ನೇ ತರಗತಿಗಳಿಗೆ ಹಾಗೂ ಪಿಜಿ, ಪದವಿ ಕೋರ್ಸ್ ಗಳಿಗೂ ಕೋಚಿಂಗ್ ನೀಡಲಾಗುವುದು.ಕರೆ: 8892036401, 8971535230
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾಲಯದಡಿ ಸಂಯೋಜಿತ ಇಲ್ಲಿನ ಪ್ರತಿಷ್ಠಿತ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬಹುಬೇಡಿಕೆಯ ಬಿ.ಎಸ್ಸಿ, ಬಿ.ಎಚ್.ಎಸ್, ಬಿ.ಎಸ್ಸಿ ಫುಡ್ ಟೆಕ್ನಾಲಜಿ, ಬಿ.ಎಸ್ಸಿ ಫ್ಯಾಷನ್ ಡಿಸೈನಿಂಗ್, ಬಿ.ಎಸ್ಸಿ ನರ್ಸಿಂಗ್, ಬಿಸಿಎ, ಬಿ.ಕಾಂ, ಬಿಬಿಎಂ ಕೋರ್ಸುಗಳ ಜೊತೆಗೆ ಏವಿಯೇಶನ್ ಎಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸುಗಳು ಲಭ್ಯವಿವೆ. ಸೌಲಭ್ಯಗಳು: ಶಿಕ್ಷಣ ಸಾಲ ಸೌಲಭ್ಯ ಇಂಟರ್ನ್ ಶಿಪ್ ಮತ್ತು ಉದ್ಯೋಗಾವಕಾಶ ವಿದ್ಯಾರ್ಥಿವೇತನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಬಸ್ ವ್ಯವಸ್ಥೆ ವಿಳಾಸ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆರಾಹೆ. […]
ಪೆರ್ಣಂಕಿಲ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಉಡುಪಿ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಣಂಕಿಲ ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾ. 25 ರಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನ

ಉಡುಪಿ: ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನ ಪರ್ಕಳ ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯಲ್ಲಿ ವಾರ್ಷಿಕ ರಥೋತ್ಸವ ಮಾ.25 ರಂದು ಜರಗಿತು. ಅನ್ನ ಸಂತರ್ಪಣೆ, ಭಜನೆ, ಸ್ಯಾಕ್ಸೋಫೋನ್ ವಾದನ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಹಚ್ಚಡ ಸೇವೆ, ಚಂಡೆವಾದನ ನಡೆಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಿ. ರಾಮದಾಸ ಹೆಗ್ಡೆ ಸಂಚಾಲಕರಾದ ದಿಲೀಪ್ ರಾಜ್ ಹೆಗ್ಡೆ, ಮಹೇಶ ಠಾಕೂರ್, ಅಧ್ಯಕ್ಷ ಬಿ. ಜಯರಾಜ ಹೆಗ್ಡೆ, ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ಸುಮಿತ್ರಾ ಆರ್. ನಾಯಕ್, […]
ವಡಭಾಂಡ ಬಲರಾಮನಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ

ಮಲ್ಪೆ: ನೂರಾರು ವರ್ಷ ಇತಿಹಾಸ ಹೊಂದಿರುವ ವಡಭಾಂಡೇಶ್ವರ ಬಲರರಾಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ದೇಗುಲದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿದಿ ವಿಧಾನಗಳು ಜರಗಿತು. ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಲಿರುವುದು. ಬಳಿಕ ನ್ಯಾಸಪೂಜೆ ಪ್ರಸನ್ನಪೂಜೆ ಅವಸೃತಬಲಿ, ಮಹಾ ಮಂತ್ರಕ್ಷತೆ, ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಪಲ್ಲಪೂಜೆಯಾಗಿ ಮಹಾಅನ್ನಸಂತರ್ಪಣೆ ನಡೆಯಿತು. ಸುಮಾರು ೧೫ ಸಾವಿರ ಮಂದಿ […]